ಕಾರ್ಮಿಕರಿಗೆ ಸಿಹಿಸುದ್ದಿ: ಇಪಿಎಫ್‌ಒ ಹೊಸ ಡಿಜಿಟಲ್ ಸೇವೆಗಳು ಆರಂಭಕ್ಕೆ ಸಜ್ಜು

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸೇವೆಗಳನ್ನು ಮತ್ತಷ್ಟು ಡಿಜಿಟಲ್ ಮತ್ತು ವೇಗವಾಗಿಸಲು ಎರಡು ಮಹತ್ವದ ಅಪ್‌ಡೇಟ್‌ಗಳನ್ನು ತರಲು ಸಜ್ಜಾಗಿದೆ. ಮೊದಲನೆಯದು ವಾಟ್ಸಾಪ್ ಚಾಟ್‌ಬಾಟ್ ಸೇವೆ, ಇದರ ಮೂಲಕ ಸದಸ್ಯರು ತಮ್ಮ ಪಿಎಫ್ ಬ್ಯಾಲನ್ಸ್, ಕ್ಲೇಮ್ ಸ್ಟೇಟಸ್ ಸೇರಿದಂತೆ ಮೂಲಭೂತ ಮಾಹಿತಿಗಳನ್ನು ತಕ್ಷಣವೇ ಪಡೆಯಬಹುದು. ಗ್ರೀನ್ ಟಿಕ್ ಹೊಂದಿರುವ ಅಧಿಕೃತ ಚಾಟ್‌ಬಾಟ್ ಮೂಲಕ ಈ ಸೇವೆ ಲಭ್ಯವಾಗಲಿದ್ದು, ಬಳಕೆದಾರರ ಅನುಭವವನ್ನು ಇನ್ನಷ್ಟು ಸರಳಗೊಳಿಸುವ ನಿರೀಕ್ಷೆಯಿದೆ.

ಇದರ ಜೊತೆಗೆ ಬಹುನಿರೀಕ್ಷಿತ ಯುಪಿಐ ಆಧಾರಿತ ಪಿಎಫ್ ವಿತ್‌ಡ್ರಾ ಫೀಚರ್ ಕೂಡ ಶೀಘ್ರದಲ್ಲೇ ಜಾರಿಗೆ ಬರಲಿದೆ. ಇದರಿಂದ ಸದಸ್ಯರು ತಮ್ಮ ಪಿಎಫ್ ಹಣವನ್ನು ನೇರವಾಗಿ ಯುಪಿಐ ಮೂಲಕ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದಾಗಿ ಹೇಳಲಾಗಿದ್ದು, ಪ್ರಸ್ತುತ ಇರುವ ದೀರ್ಘ ಕ್ಲೇಮ್ ಪ್ರಕ್ರಿಯೆ ಇನ್ನಷ್ಟು ವೇಗವಾಗುವ ಸಾಧ್ಯತೆ ಇದೆ. ಈ ಹೊಸ ವ್ಯವಸ್ಥೆಯಿಂದ ಇಪಿಎಫ್‌ಒ ತನ್ನ ಡಿಜಿಟಲ್ ಸೇವೆಗಳಲ್ಲಿ ದೊಡ್ಡ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದೆ ಎಂಬ ಸೂಚನೆ ಸಿಕ್ಕಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-20 15:04:28
No Reviews