ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.10ರಂದು ಕರೆಂಟ್‌ ಇರಲ್ಲ

ಫೆ.10ರಂದು ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ

ಕೆಪಿಟಿಸಿಎಲ್ (KPTCL) ಜಾಲಹಳ್ಳಿ ವಿಭಾಗದ 66/11 ಕೆವಿ ಎನ್‌.ಇ.ಐ ಸಬ್‌ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ,
ಫೆಬ್ರವರಿ 10 (ಮಂಗಳವಾರ) ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.

 ವಿದ್ಯುತ್‌ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು

ಎಜಿಬಿಜಿ ಲೇಔಟ್‌, ಶೆಟ್ಟಿಹಳ್ಳಿ ಗ್ರಾಮ, ಮಲ್ಲಸಂದ್ರ, ಜುಂಜಪ್ಪ ಸರ್ಕಲ್‌, ನಂದನನಗರ, ಕಾವೇರಿ ಲೇಔಟ್‌, ಚಿಕ್ಕಸಂದ್ರ ಐರ್‌ಲೇಔಟ್‌, ಸಪ್ತಗಿರಿ ಕಾಲೇಜು, ಜಗದೇಶ್‌ ಲೇಔಟ್‌, ನಾಗದೇಶ್‌ ಲೇಔಟ್‌, ತುಮಕೂರು ಮುಖ್ಯ ರಸ್ತೆ, ಮಹೇಶ್ವರಿ ನಗರ, ಕೆಂಪೇಗೌಡ ನಗರ, ಟಿ-ದಾಸರಹಳ್ಳಿ ಮೆಟ್ರೋ ಹಿಂಭಾಗ, ಪೈಪ್‌ಲೈನ್ ರಸ್ತೆ, ಬೃಂದಾವನ ಲೇಔಟ್‌, ಕಲ್ಯಾಣನಗರ, ಬಾಗಲಗುಂಟೆ, ಕಿರ್ಲೋಸ್ಕರ್ ಲೇಔಟ್‌, ಶೌರ್ಯ ಲೇಔಟ್‌, ಮೀನಾಕ್ಷಿ ಲೇಔಟ್‌, ಸಿದ್ದೇಶ್ವರ ಲೇಔಟ್‌, ಹೆಸರಘಟ್ಟ ಮುಖ್ಯ ರಸ್ತೆ, ಚಿಕ್ಕಬಾಣಾವರ, ಸೋಮಶೆಟ್ಟಿಹಳ್ಳಿ, ಮೇದರಹಳ್ಳಿ, ಗುಣಿ ಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

 ಯಲಹಂಕ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ

ಹೆಬ್ಬಾಳ ವಿಭಾಗದ 66/11 ಕೆವಿ ಯಲಹಂಕ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ,
ಫೆ.10ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಯಲಹಂಕ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ವ್ಯತ್ಯಯವಾಗಲಿದೆ.


 ಯಲಹಂಕ ವ್ಯಾಪ್ತಿಯ ಪ್ರಭಾವಿತ ಪ್ರದೇಶಗಳು

ಕೆಎಂಎಫ್‌, ವೈಎನ್‌ಕೆ ನ್ಯೂ ಟೌನ್ (208, 407, ಬಿ ಸೆಕ್ಟರ್), ಅಲ್ಲಾಳಸಂದ್ರ, ಶಾರದನಗರ, ಮಾರುತಿನಗರ, ಕೋಗಿಲು, ಬಾಗಲೂರು ಕ್ರಾಸ್‌, ವೆಂಕಟಾಲ್‌, ನಿಟ್ಟೆ ಕಾಲೇಜು, ಬಿಎಸ್‌ಎಫ್‌, ಐಎಎಫ್‌, ದ್ವಾರಕಾನಗರ, ಆರ್‌ಎಂಝಡ್‌ ಗ್ಯಾಲೇರಿಯಾ, ಅತ್ತೂರು ಬಡಾವಣೆ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಕಾವೇರಿ ಬಡಾವಣೆ, ಡಿಫೆನ್ಸ್‌ ಲೇಔಟ್‌, ಎಂ.ಎಸ್‌. ಪಾಳ್ಯ, ಟೀಚರ್ಸ್‌ ಲೇಔಟ್‌, ಎಚ್‌ಎಂಟಿ 3, 4, 6ನೇ ಬ್ಲಾಕ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು.


 ವಿದ್ಯುತ್‌ ಸಮಸ್ಯೆಗೆ ಸಂಪರ್ಕಿಸಿ

ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ 1912 ಅಥವಾ ಬೆಸ್ಕಾಂ ವಾಟ್ಸ್‌ಆಪ್‌ ಸಹಾಯವಾಣಿಗೆ ದೂರು ದಾಖಲಿಸಬಹುದು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-09 16:29:23
No Reviews