Shopping cart
Your cart empty!
Terms of use dolor sit amet consectetur, adipisicing elit. Recusandae provident ullam aperiam quo ad non corrupti sit vel quam repellat ipsa quod sed, repellendus adipisci, ducimus ea modi odio assumenda.
Lorem ipsum dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Do you agree to our terms? Sign up
ಅಣೆಕಟ್ಟುಗಳು ದೇಶದ ಶಕ್ತಿ, ಭವಿಷ್ಯದ ರಕ್ಷಕರು: ಡಿಕೆ ಶಿವಕುಮಾರ್
**ಭಾರತೀಯ ವಿಜ್ಞಾನ ಸಂಸ್ಥೆ**ಯ ಜೆಜೆ ಟಾಟಾ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದ ಉದ್ಘಾಟನೆಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, “ಬೆಂಗಳೂರು ಇಂದು ಇಡೀ ವಿಶ್ವದ ಗಮನ ಸೆಳೆದ ನಗರ. 1.50 ಕೋಟಿ ಜನಸಂಖ್ಯೆ, ಆಕರ್ಷಕ ಹವಾಮಾನ, ಶ್ರೀಮಂತ ಸಂಸ್ಕೃತಿಯಿಂದಾಗಿ ಕೈಗಾರಿಕೋದ್ಯಮಿಗಳು ಇಲ್ಲಿ ನೆಲೆಸಲು ಉತ್ಸುಕರು. ಹೀಗಾಗಿ ಎಲ್ಲರಿಗೂ ನೀರು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಹೇಳಿದರು.
ಸಮತೋಲಿತ ಅಣೆಕಟ್ಟು ನಿರ್ಮಾಣದ ಅಗತ್ಯತೆಯನ್ನು ಒತ್ತಿಹೇಳಿದ ಅವರು, “ಇತ್ತೀಚೆಗೆ ಸುಪ್ರೀಂ ಕೋರ್ಟ್ ನಮ್ಮ ಯೋಜನೆ ಪರವಾಗಿ ತೀರ್ಪು ನೀಡಿದೆ. ಕೇಂದ್ರ ಸರ್ಕಾರದ ಅನುಮತಿ ಸಿಕ್ಕ ತಕ್ಷಣ ಈ ಯೋಜನೆಯನ್ನು ಜಾರಿಗೆ ತರುತ್ತೇವೆ. ಇದರಿಂದ ಬೆಂಗಳೂರು ಸೇರಿ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ದೊರೆಯುವುದರ ಜೊತೆಗೆ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೂ ಸಹಕಾರವಾಗಲಿದೆ” ಎಂದು ವಿವರಿಸಿದರು.
ಕೃಷ್ಣಾ ಮೇಲ್ದಂಡೆ, ರೈತರ ಹಿತ ಕೇಂದ್ರೀಕೃತ ನೀತಿ
ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಮಾತನಾಡಿದ ಡಿಕೆಶಿ, “ಪಾರದರ್ಶಕ ನೀತಿ ಅನುಸರಿಸಲಾಗಿದ್ದು, ಭೂಮಿ ಕಳೆದುಕೊಳ್ಳುವ ರೈತರಿಗೆ 2013ರ ಕಾಯ್ದೆಯಂತೆ ಸಮರ್ಪಕ ಪರಿಹಾರ ನೀಡಲಾಗುತ್ತದೆ. 2025ರ ಡಿಸೆಂಬರ್ ವೇಳೆಗೆ 1.72 ಲಕ್ಷ ಎಕರೆಯ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದ್ದೇವೆ” ಎಂದರು. ಅಣೆಕಟ್ಟುಗಳ ಸುತ್ತ 500 ಮೀಟರ್ ನಿಬಂಧನೆ ಸಡಿಲಗೊಳಿಸಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದರು.
ಅಣೆಕಟ್ಟು ಸುರಕ್ಷತೆ – ರಾಷ್ಟ್ರಮಟ್ಟದ ಆದ್ಯತೆ
“ಅಣೆಕಟ್ಟುಗಳು ನಮ್ಮ ಶಕ್ತಿ, ಪ್ರಗತಿ ಮತ್ತು ಭವಿಷ್ಯದ ಪ್ರತೀಕ. ಭಾರತದಲ್ಲಿ ಸುಮಾರು 6,500 ಅಣೆಕಟ್ಟುಗಳಿದ್ದು, ಕರ್ನಾಟಕದಲ್ಲೇ 232 ಅಣೆಕಟ್ಟುಗಳಿವೆ. ಬಹುಪಾಲು 25 ವರ್ಷಕ್ಕಿಂತ ಹಳೆಯವು. ಹೀಗಾಗಿ ಸುರಕ್ಷತೆ ಮತ್ತು ದುರಸ್ತಿ ಅತ್ಯಗತ್ಯ” ಎಂದು ತಿಳಿಸಿದರು. ವಿಶ್ವ ಬ್ಯಾಂಕ್ ನೆರವಿನ DRIP ಯೋಜನೆಯ ಎರಡನೇ ಹಂತದಲ್ಲಿ ಕರ್ನಾಟಕದ 58 ಅಣೆಕಟ್ಟುಗಳಿಗೆ ₹1,500 ಕೋಟಿ ವೆಚ್ಚದಲ್ಲಿ ದುರಸ್ತಿ ನಡೆಯುತ್ತಿದೆ ಎಂದರು.
ಜಲವೇ ಸಂಪತ್ತು, ಜಲವೇ ಜೀವನ
“ಅಣೆಕಟ್ಟುಗಳು ಕೇವಲ ಇಂಜಿನಿಯರ್‌ಗಳ ಆಸ್ತಿ ಅಲ್ಲ; ಅವು ಆಹಾರ ಭದ್ರತೆ, ಇಂಧನ ಭದ್ರತೆ ಮತ್ತು ಸಾಮಾಜಿಕ ಸ್ಥಿರತೆಯ ಆಧಾರ. ಒಟ್ಟಾಗಿ ಚರ್ಚಿಸಿ, ಕಾರ್ಯರೂಪಕ್ಕೆ ತರಬಹುದಾದ ತಂತ್ರ ರೂಪಿಸೋಣ. ಅಣೆಕಟ್ಟು ಸುರಕ್ಷತೆಯಲ್ಲಿ ಕರ್ನಾಟಕವನ್ನು ದೇಶಕ್ಕೆ ಮಾದರಿಯಾಗಿಸುವುದು ನಮ್ಮ ಸಂಕಲ್ಪ” ಎಂದು ಡಿಕೆಶಿ ಕರೆ ನೀಡಿದರು.
ನವಭಾರತದ ದೇವಾಲಯಗಳು
ನೀರಿನ ನಿರ್ವಹಣೆಯ ಪರಂಪರೆಯನ್ನು ಸ್ಮರಿಸಿದ ಅವರು, “ಸ್ವಾತಂತ್ರ್ಯ ನಂತರ ಪಂಡಿತ್ ಜವಹಾರ್ ಲಾಲ್ ನೆಹರೂ ಅವರ ದೂರದೃಷ್ಟಿಯಿಂದ ಅಣೆಕಟ್ಟುಗಳನ್ನು ‘ನವಭಾರತದ ದೇವಾಲಯಗಳು’ ಎಂದು ಕರೆದರು” ಎಂದರು. 1902ರಲ್ಲಿ ಶಿವನಸಮುದ್ರದಲ್ಲಿ ಏಷ್ಯಾದಲ್ಲೇ ಮೊದಲ ಹೈಡ್ರೋ ಎಲೆಕ್ಟ್ರಿಕ್ ಕೇಂದ್ರ ಸ್ಥಾಪನೆಯಾದದ್ದು ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕರ್ನಾಟಕದ ಅಪಾರ ಕೊಡುಗೆ ಬಗ್ಗೆ ಹೆಮ್ಮೆಯಿಂದ ಹೇಳಿದರು.
“ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ನಮ್ಮ ಅಣೆಕಟ್ಟುಗಳನ್ನು ರಕ್ಷಿಸಿ, ದೇಶವನ್ನು ಪ್ರಜ್ವಲಿಸೋಣ” ಎಂದು ಡಿಕೆ ಶಿವಕುಮಾರ್ ತಮ್ಮ ಭಾಷಣವನ್ನು ಸಮಾರೋಪಗೊಳಿಸಿದರು.