ಸಂತ್ರಸ್ತೆಯರೇ ಅಥವಾ ಸಂಚಿನ ಭಾಗವೇ? ತನಿಖೆಯತ್ತ ಎಲ್ಲರ ದೃಷ್ಟಿ

ಡಿಜಿಪಿ ರಾಮಚಂದ್ರ ರಾವ್ ಎನ್ನಲಾದ ವಿಡಿಯೋ ರಾಜ್ಯಾದ್ಯಂತ ಸಂಚಲನ

ಕಚೇರಿಯೊಳಗಿನ ದೃಶ್ಯಗಳ ಕುರಿತು ಹನಿಟ್ರ್ಯಾಪ್ ಶಂಕೆ, ಮಹಿಳೆಯರು ಯಾರು ಎಂಬ ಕುತೂಹಲ

ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎಂದು ಹೇಳಲಾಗಿರುವ ಒಂದು ವಿಡಿಯೋ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸುಮಾರು 47 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಕಚೇರಿಯೊಳಗೇ ಮೂವರು ಮಹಿಳೆಯರೊಂದಿಗೆ ಅಸಭ್ಯ ವರ್ತನೆ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ವೇಗವಾಗಿ ಹರಡುತ್ತಿದೆ.
ಆದರೆ ಈ ವಿಡಿಯೋ ತಮ್ಮದಲ್ಲ ಎಂದು ಡಿಜಿಪಿ ರಾಮಚಂದ್ರ ರಾವ್ ಸ್ಪಷ್ಟನೆ ನೀಡಿದ್ದು, ಪ್ರಕರಣದ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದೆ.


ನಗುನಗುತ್ತಾ ಕಾಣಿಸಿಕೊಂಡ ಮಹಿಳೆಯರು ಯಾರು?

ಸಂತ್ರಸ್ತೆಯರೇ ಅಥವಾ ಸಂಚಿನ ಭಾಗವೇ? ತನಿಖೆಯತ್ತ ಎಲ್ಲರ ದೃಷ್ಟಿ

ಲಭ್ಯವಿರುವ ವಿಡಿಯೋದಲ್ಲಿ ಮೂವರು ಮಹಿಳೆಯರು ಡಿಜಿಪಿಯವರ ಜೊತೆ ನಗುನಗುತ್ತಾ ಕಾಣಿಸಿಕೊಂಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಪ್ರಸ್ತುತ ಅವರನ್ನು ‘ಸಂತ್ರಸ್ತೆಯರು’ ಎಂದು ಉಲ್ಲೇಖಿಸಲಾಗುತ್ತಿದರೂ, ವಿಡಿಯೋದಲ್ಲಿನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳಿಗೆ ದಾರಿ ಮಾಡಿಕೊಟ್ಟಿವೆ.
ಒಬ್ಬ ಮಹಿಳೆಯನ್ನು ಮಾಡೆಲ್ ಎಂದು ಗುರುತಿಸಲಾಗಿದೆ ಎನ್ನಲಾಗಿದರೂ, ಅಧಿಕೃತವಾಗಿ ಯಾರ ಗುರುತನ್ನೂ ಬಹಿರಂಗಪಡಿಸಲಾಗಿಲ್ಲ.

ಇದು ಹನಿಟ್ರ್ಯಾಪ್ ಪ್ರಕರಣವೇ?,
ಅಥವಾ ಅಧಿಕಾರದ ಆಮಿಷದಿಂದ ನಡೆದ ಘಟನೆವೇ?
ಅಥವಾ ಉದ್ದೇಶಪೂರ್ವಕವಾಗಿ ಯಾರೋ ವಿಡಿಯೋ ಚಿತ್ರೀಕರಿಸಿ ಸೋರಿಕೆ ಮಾಡಿದ್ದಾರೆಯೇ?

ಈ ಎಲ್ಲ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ. ಪೊಲೀಸ್ ಹುದ್ದೆಯಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಕಚೇರಿಯೊಳಗೇ ಇಂತಹ ಘಟನೆ ನಡೆದಿದೆ ಎನ್ನುವ ಆರೋಪಗಳು ಗಂಭೀರವಾಗಿದ್ದು, ಇದರ ಪರಿಣಾಮವಾಗಿ ಡಿಜಿಪಿ ಅಮಾನತು ಆಗಿರುವುದಾಗಿ ವರದಿಯಾಗಿದೆ. ಕೆಲವೇ ತಿಂಗಳಲ್ಲಿ ನಿವೃತ್ತಿಯಾಗಬೇಕಿದ್ದ ಸಂದರ್ಭದಲ್ಲಿ ಈ ವಿವಾದ ಉದ್ಭವಿಸಿರುವುದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

ಈ ಪ್ರಕರಣದಲ್ಲಿ ಮಹಿಳೆಯರು ನಿಜವಾಗಿಯೂ ಮೋಸದ ಜಾಲಕ್ಕೆ ಸಿಲುಕಿದವರೇ, ಅಥವಾ ಘಟನೆಗೆ ಬೇರೆ ಆಯಾಮವಿದೆಯೇ ಎಂಬುದು ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ. ಸದ್ಯಕ್ಕೆ, ಎಲ್ಲರೂ ತನಿಖೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-20 15:09:21
No Reviews