ನೆಟ್ ಸೆಷನ್‌ನಲ್ಲಿ ಅನಾಹುತ! ಡೆಲ್ಲಿ ಆಟಗಾರನಿಗೆ ಗಾಯ

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ ಹಗಲು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಅಜೇಯವಾಗಿ ಮುನ್ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ 6ನೇ ಸ್ಥಾನದಲ್ಲಿರುವ ಡೆಲ್ಲಿ, ಅಗ್ರಸ್ಥಾನದಲ್ಲಿರುವ ಪಂಜಾಬ್‌ಗೆ ಸವಾಲು ಹಾಕಲು ಸಜ್ಜಾಗಿದೆ.

ಪಂದ್ಯದ ಪೂರ್ವ ತಯಾರಿಯ ವೇಳೆ ದುರ್ಘಟನೆ ಸಂಭವಿಸಿದ್ದು, ಡೆಲ್ಲಿ ತಂಡದ ನೆಟ್ ಬೌಲರ್ ಒಬ್ಬರಿಗೆ ಅಭ್ಯಾಸದ ವೇಳೆ ಚೆಂಡು ತಲೆಗೆ ಬಲವಾಗಿ ಬಡಿದು ಗಂಭೀರ ಗಾಯವಾಗಿದೆ. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಕುರಿತು ಹೆಚ್ಚಿನ ವಿವರಗಳನ್ನು ತಂಡ ಇನ್ನೂ ಬಹಿರಂಗಪಡಿಸಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಗಾಯಗೊಂಡ ಆಟಗಾರನ ತಲೆಯಿಂದ ರಕ್ತಸ್ರಾವವಾಗುತ್ತಿರುವುದು ಮತ್ತು ವೈದ್ಯಕೀಯ ಸಿಬ್ಬಂದಿ ತಕ್ಷಣ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಚಿಕಿತ್ಸೆ ಬಳಿಕವೂ ಚೇತರಿಕೆ ಕಾಣದ ಕಾರಣ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಮಧ್ಯೆ, ಪಂದ್ಯಾವಳಿಯ ಅಂತಿಮ ಹಂತಕ್ಕೆ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸ್ಥಿರ ಪ್ರದರ್ಶನದ ಅಗತ್ಯ ಹೆಚ್ಚಾಗಿದೆ. ಆರಂಭದಲ್ಲಿ ಉತ್ತಮ ಫಾರ್ಮ್ ತೋರಿಸಿದ್ದ ಪಾತುಮ್ ನಿಸ್ಸಂಕಾ ಮತ್ತು ಮಧ್ಯಮ ಕ್ರಮಾಂಕ ಇದೀಗ ಅಸ್ಥಿರತೆಯನ್ನು ಎದುರಿಸುತ್ತಿದೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ತಂಡಕ್ಕೆ ಸೇರಿಕೊಂಡರೂ, ಅವರು ಇನ್ನೂ ಕಣಕ್ಕಿಳಿಯುವ ಹಂತಕ್ಕೆ ಬಂದಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ:
ಪಾತುಮ್ ನಿಸ್ಸಂಕಾ, ಕೆಎಲ್ ರಾಹುಲ್ ವಿ.ಕೀ., ನಿತೀಶ್ ರಾಣಾ, ಸಮೀರ್ ರಿಜ್ವಿ, ಅಕ್ಷರ್ ಪಟೇಲ್ನಾ ಯಕ ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.
ಇಂಪ್ಯಾಕ್ಟ್ ಪ್ಲೇಯರ್: ಅಶುತೋಷ್ ಶರ್ಮಾ

ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ:
ಪ್ರಭ್‌ಸಿಮ್ರಾನ್ ಸಿಂಗ್ ವಿ.ಕೀ. ಪ್ರಿಯಾಂಶ್ ಆರ್ಯ, ಮಿಚೆಲ್ ಓವನ್, ಶ್ರೇಯಸ್ ಅಯ್ಯರ್ ನಾಯಕ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್ಕುಮಾರ್ ವೈಶಾಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-25 12:54:43
No Reviews