ಮೈದಾನದಲ್ಲಿ ಕಾವೇರಿದ ವಾಗ್ವಾದ — ಕೊಹ್ಲಿ-ಹೆಡ್ ನಡುವೆ ಅಸಲಿ ಕಥೆ ಏನು..?

ಐಪಿಎಲ್ 2026ರ 67ನೇ ಪಂದ್ಯದಲ್ಲಿ ಬ್ಯಾಟ್ ಮತ್ತು ಬಾಲ್‌ಗಿಂತ ಹೆಚ್ಚು ಸದ್ದು ಮಾಡಿದ್ದು ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವಿನ ಜಟಾಪಟಿ. ಹೆಡ್ ಔಟ್ ಆದ ಕ್ಷಣ ಕೊಹ್ಲಿ ತೋರಿಸಿದ ಆಕ್ರಮಣಕಾರಿ ಸಂಭ್ರಮವೇ ಈ ವಾಕ್ಸಮರಕ್ಕೆ ಚಾಲನೆ ನೀಡಿತು. ಬಳಿಕ ಮೈದಾನಕ್ಕಿಳಿದ ಕೊಹ್ಲಿಗೆ “ಬಿಗ್ ಶಾಟ್ ಆಡೋಣ ನೋಡೋಣ” ಎಂದು ಹೆಡ್ ಸವಾಲು ಹಾಕಿದ್ದರೆ, ಅದಕ್ಕೆ ವಿರಾಟ್ ಕೂಡ ಖಡಕ್ ತಿರುಗೇಟು ನೀಡಿದರು. ಮಾತಿನ ಚಕಮಕಿ ಕಾವೇರಿದ ಬೆನ್ನಲ್ಲೇ ಕೊಹ್ಲಿ ಔಟ್ ಆಗಿದ್ದು, ಅದನ್ನೇ ಹೆಡ್ ಮತ್ತೆ ಕಿಚಾಯಿಸಿದ್ದು ಪಂದ್ಯವನ್ನು ಇನ್ನಷ್ಟು ಹೈವೋಲ್ಟೇಜ್ ಮಾಡಿತು.

ಆದರೆ ನಿಜವಾದ ಡ್ರಾಮಾ ಪಂದ್ಯ ಮುಗಿದ ನಂತರವೇ ಕಂಡುಬಂತು. ಹಸ್ತಲಾಘವ ವೇಳೆ ಟ್ರಾವಿಸ್ ಹೆಡ್ ಕೈ ಚಾಚಿದರೂ, ವಿರಾಟ್ ಕೊಹ್ಲಿ ಸಂಪೂರ್ಣ ನಿರ್ಲಕ್ಷಿಸಿ ಮುಂದೆ ನಡೆದು ಹೋದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು “ಆಕ್ರಮಣಕಾರಿ ಮನೋಭಾವ” ಎಂದು ಬೆಂಬಲಿಸುತ್ತಿದ್ದರೆ, ಮತ್ತೊಬ್ಬರು “ಕ್ರೀಡಾ ಸ್ಫೂರ್ತಿಗೆ ಧಕ್ಕೆ” ಎಂದು ಟೀಕಿಸುತ್ತಿದ್ದಾರೆ. ಈಗ ಈ ಘಟನೆ ಐಪಿಎಲ್ 2026ರ ಅತ್ಯಂತ ವೈರಲ್ ಕ್ಷಣಗಳಲ್ಲಿ ಒಂದಾಗಿ ಮಾರ್ಪಟ್ಟಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-23 11:27:09
No Reviews