ವಿರೋಶ್ ಜೋಡಿ ಪ್ರಧಾನಿ ಮೋದಿಗೆ ವಿಶೇಷ ಆಹ್ವಾನ

ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ ವಿವಾಹ ಸಮಾರಂಭದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ–ರಶ್ಮಿಕಾ ಮಂದಣ್ಣ (ವಿರೋಶ್) ಜೋಡಿ, ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಹೈದರಾಬಾದ್‌ನಲ್ಲಿ ನಡೆಯಲಿರುವ ಆರತಕ್ಷತೆಗೆ ಆತ್ಮೀಯ ಆಹ್ವಾನ ನೀಡಿದರು.

ನವವಧು ರಶ್ಮಿಕಾ ಹಳದಿ ಚುಡಿದಾರ್‌ನಲ್ಲಿ, ವಿಜಯ್ ಬಿಳಿ ಸಲ್ವಾರ್‌ನಲ್ಲಿ ಮೆರೆದರು. ಪ್ರಧಾನಿಯವರೊಂದಿಗೆ ಆತ್ಮೀಯ ಸಂವಾದ ನಡೆಸಿದ ಜೋಡಿ, ಶಾಲು ಸಮರ್ಪಿಸಿ ಗೌರವ ಸಲ್ಲಿಸಿದರು. ವಿವಾಹಕ್ಕೂ ಮುನ್ನವೇ ಪ್ರಧಾನಿ ಮೋದಿಯವರು ಅಭಿನಂದನಾ ಪತ್ರ ಕಳುಹಿಸಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ಶುಭಾಶಯ ತಿಳಿಸಿದ್ದರು.

ಮೋದಿ ಭೇಟಿಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ವಿರೋಶ್ ಜೋಡಿ, ಮಾರ್ಚ್ 4, 2026 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಆರತಕ್ಷತೆಗೆ ಆಹ್ವಾನ ನೀಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-27 15:41:18
No Reviews