ಕೇಂದ್ರ ಬಜೆಟ್‌ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಈ ಬಜೆಟ್‌ನಲ್ಲಿ ದೇಶ ಎದುರಿಸುತ್ತಿರುವ ನೈಜ ಆರ್ಥಿಕ ಬಿಕ್ಕಟ್ಟುಗಳನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಭಾರತ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ಬದಲು, ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ” ಎಂದು ಹೇಳಿದ್ದಾರೆ. ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಳ, ಉತ್ಪಾದನಾ ಕ್ಷೇತ್ರದ ಕುಸಿತ, ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ, ಗೃಹ ಉಳಿತಾಯದ ಇಳಿಕೆ, ರೈತರ ಸಂಕಷ್ಟ ಹಾಗೂ ಜಾಗತಿಕ ಆರ್ಥಿಕ ಆಘಾತಗಳು ದೇಶವನ್ನು ಕಾಡುತ್ತಿವೆ. ಆದರೆ ಬಜೆಟ್‌ನಲ್ಲಿ ಈ ವಿಚಾರಗಳಿಗೆ ಯಾವುದೇ ಸ್ಪಷ್ಟ ಪರಿಹಾರ ಕಾಣುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

ಇದೊಂದೆಡೆ, ಮಧ್ಯಮ ವರ್ಗಕ್ಕೆ ನಿರಾಸೆ ಉಂಟುಮಾಡಿದ ಬಜೆಟ್ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಸ್ತಿ ಮತ್ತು ಸಂಬಳದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಸಚಿವೆ ನಿರ್ಮಲಾ ಸೀತಾರಾಮನ್ ಅವರ ಒಟ್ಟು ಆಸ್ತಿ ಸುಮಾರು 2.75 ಕೋಟಿ ರೂ. ಆಗಿದ್ದು, ಇದರಲ್ಲಿ 1.11 ಕೋಟಿ ರೂ. ಸಾಲವೂ ಸೇರಿದೆ. ಗಮನಾರ್ಹ ಸಂಗತಿಯೆಂದರೆ, ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ನಿರ್ವಹಿಸುವ ಸಚಿವೆ ಬಳಿ ಕಾರು ಇಲ್ಲ. ಅವರು ಬಳಸುತ್ತಿರುವುದು ಕೇವಲ ಒಂದು ಬಜಾಜ್ ಚೇತಕ್ ಸ್ಕೂಟರ್ ಮಾತ್ರ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-02 16:56:08
No Reviews