ಫಿನಾಲೆಗೆ ಇನ್ನೆರಡೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಬಿಗ್ ಬಾಸ್ʼ ವೀಕ್ಷಕರಿಗೆ ಶಾಕ್ ನೀಡಿದೆ

ಫಿನಾಲೆಗೆ ಇನ್ನೆರಡೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ʻಬಿಗ್ ಬಾಸ್ʼ ವೀಕ್ಷಕರಿಗೆ ಅಚ್ಚರಿಯ ಶಾಕ್ ನೀಡಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗುತ್ತಿದ್ದ 24 ಗಂಟೆಗಳ ಲೈವ್ ಫೀಡ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಿರುವುದಾಗಿ ಬಿಗ್ ಬಾಸ್ ಘೋಷಿಸಿದ್ದಾರೆ. ಸತತ 108 ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ್ದ ಈ ಲೈವ್ ಪ್ರಸಾರಕ್ಕೆ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ವಿದಾಯ ಹೇಳಲಾಗಿದೆ.

ಬಿಗ್ ಬಾಸ್ ಕನ್ನಡ 12 ಫಿನಾಲೆಗೆ ಕೇವಲ ಎರಡು ದಿನಗಳು ಮಾತ್ರ ಉಳಿದಿರುವಾಗ, ವೀಕ್ಷಕರನ್ನು ನಿರಂತರವಾಗಿ ಮನರಂಜಿಸುತ್ತಿದ್ದ ಜಿಯೋ ಹಾಟ್ಸ್ಟಾರ್ನ ಲೈವ್ ಫೀಡ್ ಇದೀಗ ನಿಂತಿದೆ. 24 ಗಂಟೆಗಳ ಕಾಲ ಮನೆ ಒಳಗಿನ ಘಟನೆಗಳನ್ನು ವೀಕ್ಷಕರು ಲೈವ್‌ನಲ್ಲಿ ನೋಡುತ್ತಿದ್ದ ವ್ಯವಸ್ಥೆ ಈಗ ಅಧಿಕೃತವಾಗಿ ಸ್ಥಗಿತಗೊಂಡಿದೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಬಿಗ್ ಬಾಸ್, “ಸೂರ್ಯ ಸಂಕ್ರಮಣವನ್ನು ಸೂಚಿಸುವ ಮಕರ ಸಂಕ್ರಾಂತಿ ಹಬ್ಬ ಆತ್ಮಾವಲೋಕನ ಹಾಗೂ ಕೃತಜ್ಞತೆಯ ಸಮಯ. ನಮ್ಮ ಕನ್ನಡ ಸಂಸ್ಕೃತಿಯಲ್ಲಿ ಸಂಕ್ರಾಂತಿಗೆ ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ’ ಎಂಬ ಅರ್ಥಪೂರ್ಣ ನುಡಿ ಇದೆ. ಅಂತೆಯೇ, ನಾವೂ ಒಂದು ಸಂಕ್ರಮಣದ ಹಂತವನ್ನು ತಲುಪಿದ್ದೇವೆ. ಇಂದಿನ ಲೈಟ್ಸ್ ಆಫ್ ಜೊತೆಗೆ, 108 ದಿನಗಳ ಕಾಲ ಈ ಮನೆಯನ್ನು ವೀಕ್ಷಕರಿಗೆ ಪರಿಚಯಿಸಿದ ಜಿಯೋ ಹಾಟ್ಸ್ಟಾರ್ನ ಲೈವ್ ಫೀಡ್ ಕೂಡ ಆಫ್ ಆಗಲಿದೆ” ಎಂದು ತಿಳಿಸಿದ್ದಾರೆ.

ಇನ್ನೂ ಲೈವ್ ಫೀಡ್ ಸ್ಥಗಿತಗೊಳಿಸುವ ಮುನ್ನ ಸ್ಪರ್ಧಿಗಳಿಗೆ ಸೂಚನೆ ನೀಡಿದ ಬಿಗ್ ಬಾಸ್, “ಈ ಮನೆಯ ಪ್ರಯಾಣದಲ್ಲಿ ನಿಮ್ಮ ಜೊತೆ ಸಹಪ್ರಯಾಣಿಕರಾಗಿದ್ದ ಲೈವ್ ವೀಕ್ಷಕರೊಂದಿಗೆ ಮನಸ್ಪೂರ್ತಿಯಾಗಿ ಮಾತನಾಡಿ, ಅವರಿಗೆ ವಿದಾಯ ಹೇಳಿ. ಇಲ್ಲಿವರೆಗೆ ನಿಮ್ಮನ್ನು ಬೆಂಬಲಿಸಿದವರಿಗೆ ನಿಮ್ಮನ್ನು ಗೆಲ್ಲಿಸುವಂತೆ ವಿನಂತಿಸಿಕೊಳ್ಳಿ” ಎಂದು ಹೇಳಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-16 15:06:27
No Reviews