‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಚಾಲೆಂಜ್ ಗೆದ್ದ ರಕ್ಷಿತಾ ಶೆಟ್ಟಿ

ಸೀಸನ್‌ನ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದ ರಕ್ಷಿತಾ, ಅಶ್ವಿನಿ ಗೌಡ ವಿರುದ್ಧದ ಚಾಲೆಂಜ್‌ನಲ್ಲಿ ಗೆದ್ದು, ‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಎಂಬ ತಮ್ಮ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಅಶ್ವಿನಿ ಗೌಡ ಜೊತೆಗಿನ ನಿರಂತರ ಕಿತ್ತಾಟಗಳು ರಕ್ಷಿತಾ ಶೆಟ್ಟಿಗೆ ಇನ್ನಷ್ಟು ಜನಪ್ರಚಾರ ತಂದುಕೊಟ್ಟವು. ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಅವರ ಪಯಣ ಪ್ರೇಕ್ಷಕರ ಗಮನವನ್ನು ಬಹಳಷ್ಟು ಸೆಳೆದಿತ್ತು.

ಅಂತಿಮ ಹಂತದಲ್ಲಿ ರಕ್ಷಿತಾ ಶೆಟ್ಟಿ ಗಿಲ್ಲಿ ನಟನ ಜೊತೆ ಸ್ಪರ್ಧಿಸಿದ್ದರು. ಗಿಲ್ಲಿಗಿಂತ ಕಡಿಮೆ ಮತಗಳನ್ನು ಪಡೆದು ಅವರು ಮೊದಲ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ರಕ್ಷಿತಾಗೆ ಬಂದ ಮತಗಳ ಸಂಖ್ಯೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ಆದರೆ ಗಿಲ್ಲಿಗೆ 40 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎನ್ನಲಾಗಿದೆ.

ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ನಡುವೆ ನಡೆದ ಜಗಳಗಳು ಆಟಕ್ಕೆ ಮತ್ತಷ್ಟು ತಿರುವು ನೀಡಿದವು. ರಕ್ಷಿತಾನ ಕೆಳಕ್ಕೆ ಎಳೆಯಲು ಅಶ್ವಿನಿ ಪ್ರಯತ್ನಿಸಿದ ಪ್ರತಿ ಸಂದರ್ಭದಲ್ಲೂ ರಕ್ಷಿತಾ ಇನ್ನಷ್ಟು ಬಲಿಷ್ಠವಾಗಿ ಮೇಲಕ್ಕೆ ಏರಿದರು.

ಈ ಹಿಂದೆ ಅಶ್ವಿನಿಯೊಂದಿಗೆ ಜಗಳದ ವೇಳೆ ರಕ್ಷಿತಾ, ‘ಬಿಗ್ ಬಾಸ್ ಮನೆಯಿಂದ ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಎಂದು ಚಾಲೆಂಜ್ ಹಾಕಿದ್ದರು. ಇದೀಗ ಅಶ್ವಿನಿ ಔಟ್ ಆಗುವುದರೊಂದಿಗೆ ಆ ಚಾಲೆಂಜ್ ನಿಜವಾದಂತಾಗಿದೆ.

ಟಾಪ್ 6ರಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ, ರಘು ಹಾಗೂ ಧನುಷ್ ಇದ್ದರು. ಮೊದಲು ಧನುಷ್ ಎಲಿಮಿನೇಟ್ ಆದ ಬಳಿಕ ರಘು ಮತ್ತು ನಂತರ ಕಾವ್ಯಾ ಹೊರನಡೆದರು. ಟಾಪ್ 3ನಲ್ಲಿ ರಕ್ಷಿತಾ, ಅಶ್ವಿನಿ ಮತ್ತು ಗಿಲ್ಲಿ ಇದ್ದರು. ಟಾಪ್ 2ರಲ್ಲಿ ತಾನಿರುತ್ತೇನೆ ಎಂಬ ಅಶ್ವಿನಿಯ ನಿರೀಕ್ಷೆ ವಿಫಲವಾಗಿದ್ದು, ಈ ಚಾಲೆಂಜ್‌ನಲ್ಲಿ ಕೊನೆಗೂ ಗೆದ್ದವರು ರಕ್ಷಿತಾ ಶೆಟ್ಟಿ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-19 10:47:13
No Reviews