ಜನರ್ದಾನ ರೆಡ್ಡಿ ಮನೆಗೆ ಗಿಲ್ಲಿ ನಟ ಭೇಟಿ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ವಿನ್ನರ್‌ ಆಗಿ ಹೊರಹೊಮ್ಮಿದ ಗಿಲ್ಲಿ ನಟ ಅವರಿಗೆ ಎಲ್ಲೆಡೆ ಅಪಾರ ಪ್ರೀತಿ ಹಾಗೂ ಗೌರವ ದೊರೆಯುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಸೇರಿದಂತೆ ಹಲವು ಗಣ್ಯ ರಾಜಕಾರಣಿಗಳು ಅವರನ್ನು ಭೇಟಿಯಾಗಿ ಹಾರೈಕೆಗಳನ್ನು ತಿಳಿಸಿದ್ದಾರೆ. ಅವರ ಸಾಧನೆಗೆ ಸಮಾಜದ ವಿವಿಧ ವರ್ಗಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದೀಗ ಮಾಜಿ ಸಚಿವ ಜನರ್ದಾನ ರೆಡ್ಡಿ ಅವರು ಗಿಲ್ಲಿ ನಟ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಆತ್ಮೀಯವಾಗಿ ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ಗಿಲ್ಲಿ ನಟ ಅವರ ಮುಂದಿನ ಕಲಾ ಜೀವನ ಯಶಸ್ಸು, ಗೌರವ ಮತ್ತು ಹೊಸ ಅವಕಾಶಗಳಿಂದ ತುಂಬಿರಲಿ” ಎಂದು ಹೃದಯಪೂರ್ವಕವಾಗಿ ಶುಭ ಹಾರೈಸಿದರು.

ಬಿಗ್‌ ಬಾಸ್‌ ವೇದಿಕೆಯಿಂದ ಜನಮನ ಗೆದ್ದ ಗಿಲ್ಲಿ ನಟರ ಈ ಸಾಧನೆ, ಅವರ ಪರಿಶ್ರಮ ಹಾಗೂ ಪ್ರತಿಭೆಗೆ ದೊರೆತ ಮಾನ್ಯತೆಯಾಗಿದೆ. ಜನರ್ದಾನ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ ಈ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆಯುತ್ತಿವೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-29 14:51:26
No Reviews