Shopping cart
Your cart empty!
Terms of use dolor sit amet consectetur, adipisicing elit. Recusandae provident ullam aperiam quo ad non corrupti sit vel quam repellat ipsa quod sed, repellendus adipisci, ducimus ea modi odio assumenda.
Lorem ipsum dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Do you agree to our terms? Sign up
ದೇವಾಲಯಗಳ ಭದ್ರತೆ ಜೊತೆಗೆ ಭಕ್ತರ ಸೌಲಭ್ಯಕ್ಕೂ ಆದ್ಯತೆ ಅಗತ್ಯ
ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಕಳವು ಘಟನೆ ಬಳಿಕ ರಾಜ್ಯ ಸರಕಾರ ಮುಜರಾಯಿ ದೇವಾಲಯಗಳ ಭದ್ರತೆ ಕುರಿತು ಎಚ್ಚೆತ್ತುಕೊಂಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿರುವುದು ಸೂಕ್ತ ನಿರ್ಧಾರವಾಗಿದೆ.
ಈ ಕ್ಯಾಮೆರಾಗಳನ್ನು ಹುಂಡಿ ಇರುವ ಸ್ಥಳ, ಕಾಣಿಕೆ ಎಣಿಕೆ ಮಾಡುವ ಜಾಗ ಸೇರಿದಂತೆ ದೇವಾಲಯದ ಪ್ರಮುಖ ಪ್ರದೇಶಗಳನ್ನು ಆವರಿಸುವಂತೆ ಅಳವಡಿಸಲಾಗುತ್ತದೆ. ಅಲ್ಲದೆ, ಅವುಗಳನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ಸಂಪರ್ಕಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದು ದೇವಾಲಯಗಳ ಆಸ್ತಿ ಮತ್ತು ಭಕ್ತರ ನಂಬಿಕೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ; ಅವು ಕೋಟ್ಯಂತರ ಭಕ್ತರ ಭಾವನೆ, ನಂಬಿಕೆ ಮತ್ತು ಆಧ್ಯಾತ್ಮಿಕ ಆಶ್ರಯದ ತಾಣಗಳಾಗಿವೆ. ಭಕ್ತರು ತಮ್ಮ ಶ್ರಮದಿಂದ ಸಂಪಾದಿಸಿದ ಹಣ, ಚಿನ್ನ, ಬೆಳ್ಳಿ ಹಾಗೂ ಇತರ ವಸ್ತುಗಳನ್ನು ಭಕ್ತಿಭಾವದಿಂದ ಕಾಣಿಕೆಯಾಗಿ ಅರ್ಪಿಸುತ್ತಾರೆ. ಅಂತಹ ಕಾಣಿಕೆಗಳ ಕಳವು ಎಂದರೆ ಕೇವಲ ಆಸ್ತಿಯ ನಷ್ಟವಲ್ಲ, ಅದು ಭಕ್ತರ ವಿಶ್ವಾಸಕ್ಕೆ ಮಾಡುವ ಧಕ್ಕೆ.
ಭದ್ರತಾ ವ್ಯವಸ್ಥೆ ಬಲಪಡಿಸುವುದರ ಜೊತೆಗೆ ಮುಜರಾಯಿ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವತ್ತಲೂ ಸರಕಾರ ಗಮನ ಹರಿಸಬೇಕು. ಪಾದರಕ್ಷೆ ಇಡುವ ಸ್ಥಳ, ಪ್ರಸಾದ ವಿತರಣೆ ಕೇಂದ್ರ, ಕುಡಿಯುವ ನೀರು, ಸ್ವಚ್ಛತೆ ಹಾಗೂ ಸರತಿ ಸಾಲಿನ ವ್ಯವಸ್ಥೆಗಳು ಸುಗಮವಾಗಿರಬೇಕು.
ಅರ್ಚಕರು, ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ಸಮರ್ಪಕ ವೇತನ, ಸೌಲಭ್ಯ ಮತ್ತು ಗೌರವಯುತ ಕೆಲಸದ ವಾತಾವರಣ ಕಲ್ಪಿಸುವುದು ಕೂಡ ಮುಖ್ಯ. ಸಿಬ್ಬಂದಿಯ ಅಗತ್ಯಗಳನ್ನು ಸರಿಯಾಗಿ ಪೂರೈಸಿದಾಗ ದೇವಾಲಯದ ವ್ಯವಸ್ಥೆ ಇನ್ನಷ್ಟು ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲು ಸಾಧ್ಯವಾಗುತ್ತದೆ.
ದೊಡ್ಡ ದೇವಾಲಯಗಳಲ್ಲಿ ವಿವಿಐಪಿ ದರ್ಶನಕ್ಕಾಗಿ ಹೆಚ್ಚಿನ ಶುಲ್ಕದ ವ್ಯವಸ್ಥೆ ಇರುವುದರಿಂದ ಸಾಮಾನ್ಯ ಭಕ್ತರಲ್ಲಿ ಅಸಮಾಧಾನ ಮೂಡುವ ಸಂದರ್ಭಗಳಿವೆ. ದೇವರ ಸನ್ನಿಧಿಯಲ್ಲಿ ಎಲ್ಲ ಭಕ್ತರೂ ಸಮಾನರು ಎಂಬ ಭಾವನೆ ಉಳಿಯುವಂತೆ ವ್ಯವಸ್ಥೆ ರೂಪಿಸುವುದು ಅಗತ್ಯ.
ಇದೇ ವೇಳೆ, ಕೆಲವು ಪ್ರಸಿದ್ಧ ದೇವಾಲಯಗಳು ಅಪಾರ ಆದಾಯ ಹೊಂದಿದ್ದರೆ, ಇನ್ನೂ ಹಲವು ಸಣ್ಣ ದೇವಾಲಯಗಳು ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಆದಾಯವಿರುವ ದೇವಾಲಯಗಳ ಸಂಪನ್ಮೂಲದ ಒಂದು ಭಾಗವನ್ನು ಅಗತ್ಯವಿರುವ ದೇವಾಲಯಗಳ ಅಭಿವೃದ್ಧಿಗೆ ಬಳಸುವುದು ಉತ್ತಮ ಕ್ರಮವಾಗಬಹುದು.
ದೇವಾಲಯಗಳು ಭಕ್ತರಿಗೆ ಕೇವಲ ದರ್ಶನದ ಸ್ಥಳವಾಗದೆ, ನೆಮ್ಮದಿ, ಸ್ವಚ್ಛತೆ, ಶಿಸ್ತು ಮತ್ತು ಆಧ್ಯಾತ್ಮಿಕ ಅನುಭವ ನೀಡುವ ಪವಿತ್ರ ತಾಣಗಳಾಗಬೇಕು. ಭದ್ರತೆ ಮತ್ತು ಭಕ್ತರ ಸೌಲಭ್ಯ ಎರಡಕ್ಕೂ ಸಮಾನ ಆದ್ಯತೆ ನೀಡಿದಾಗ ಮಾತ್ರ ದೇವಾಲಯಗಳ ಮೇಲಿನ ಜನರ ವಿಶ್ವಾಸ ಮತ್ತಷ್ಟು ಗಟ್ಟಿಯಾಗುತ್ತದೆ.