Ajit Pawar Death: ಅಜಿತ್‌ ಪವಾರ್‌ ನಿಧನಕ್ಕೆ ಕರ್ನಾಟಕ ವಿಧಾನಮಂಡಲದಲ್ಲಿ ಸಂತಾಪ

ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು, ಇಂದು ಬೆಳಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಅವರೊಂದಿಗೆ ಪ್ರಯಾಣಿಸುತ್ತಿದ್ದ ಐವರು ಸಹಯಾತ್ರಿಗಳು ನಿಧನರಾದ ಸುದ್ದಿ ಅತ್ಯಂತ ವಿಷಾದಕರವಾಗಿದೆ ಎಂದು ಗಂಭೀರ ಸಂತಾಪ ಸೂಚಿಸಿದರು. ಸದನ ಆರಂಭವಾಗುತ್ತಿದ್ದಂತೆ ಮೃತರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

1959 ಜುಲೈ 7ರಂದು ಅಹಮದ್ ನಗರದಲ್ಲಿ ಜನಿಸಿದ ಅಜಿತ್ ಪವಾರ್ ಅವರು ಸಹಕಾರಿ ಚಳವಳಿಯಿಂದ ರಾಜಕೀಯಕ್ಕೆ ಕಾಲಿಟ್ಟು, ಲೋಕಸಭೆ–ವಿಧಾನಸಭೆ–ಸಚಿವ ಸ್ಥಾನಗಳ ಮೂಲಕ ದೀರ್ಘ ಸಾರ್ವಜನಿಕ ಸೇವೆ ಸಲ್ಲಿಸಿದರು. ಆರು ಅವಧಿಗಳಲ್ಲಿ ಉಪಮುಖ್ಯಮಂತ್ರಿಯಾಗಿ, ರೈತರು–ಬಡವರ ಧ್ವನಿಯಾಗಿ ದಿಟ್ಟ ನಾಯಕತ್ವ ನೀಡಿದ ‘ಅಜಿತ್ ದಾದಾ’ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶವ್ಯಾಪಿ ನಾಯಕರು ಕಂಬನಿ ಮಿಡಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-28 13:45:55
No Reviews