2ನೇ ವಿಮಾನ ನಿಲ್ದಾಣಕ್ಕೆ ಸರ್ಕಾರದ ಹೆಜ್ಜೆ

ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ: 2ನೇ ಏರ್‌ಪೋರ್ಟ್ ಯೋಜನೆಗೆ ಆಹ್ವಾನಿಸಿದ ಟೆಂಡರ್‌ನಲ್ಲಿ 3–4 ಪ್ರಮುಖ ಸಂಸ್ಥೆಗಳು ಭಾಗವಹಿಸಿದ್ದು, ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅವರ ವರದಿಯ ಆಧಾರದಲ್ಲಿ ಮುಂದಿನ ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದು.

ಪ್ರಸ್ತಾವಿತ ವಿಮಾನ ನಿಲ್ದಾಣವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ವಾಯು ಸಂಚಾರ ಬೇಡಿಕೆಯನ್ನು ತೃಪ್ತಿಪಡಿಸುವುದರ ಜೊತೆಗೆ, ಕರ್ನಾಟಕದ ದೀರ್ಘಕಾಲೀನ ವಾಯುಯಾನ ಮತ್ತು ಆರ್ಥಿಕ ಬೆಳವಣಿಗೆಗೆ ದಿಕ್ಕು ತೋರಿಸುವ ಪ್ರಮುಖ ಹೆಜ್ಜೆಯಾಗಲಿದೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-20 14:23:45
No Reviews