ಯುದ್ಧದ ಹಿನ್ನೆಲೆಯಲ್ಲಿ ಆಫ್ಘಾನ್-ಲಂಕಾ ಪಂದ್ಯ ಮುಂದೂಡಿಕೆ

ಯುದ್ಧದ ಕಾಳಗ, ಕ್ರಿಕೆಟ್ ವೈಟ್-ಬಾಲ್ ಸರಣಿ ಮುಂದೂಡಿಕೆ
ಅಫ್ಘಾನ್ vs ಲಂಕಾ: ರಶೀದ್ ಖಾನ್ ಸ್ಥಾನದಿಂದ ಕೈ ಹಿಂಡಿಸಿ, ಇಬ್ರಾಹಿಂ ಜದ್ರಾನ್ ಹೊಸ ನಾಯಕ

ಕಾಬುಲ್‌, ಮಾ.11: ಮಧ್ಯಪ್ರಾಚ್ಯದ ಉದ್ದೀಪನದ ಕಾರಣದಿಂದಾಗಿ ಜಾಗತಿಕ ಮಟ್ಟದ ವ್ಯಾಪಾರ, ಜನಜೀವನ ಮತ್ತು ಕ್ರೀಡಾಚಟುವಟಿಕೆ ಮೇಲೆ ಪರಿಣಾಮ ಬೀರಿದ್ದು, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಮಾರ್ಚ್ 13 ರಿಂದ 25 ರವರೆಗೆ ನಡೆಯಬೇಕಿದ್ದ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ವಾಯು ಸಂಚಾರ ಅಡಚಣೆಗಳು, ಭದ್ರತಾ ಕಾಳಜಿಗಳು ಮತ್ತು ಯುದ್ಧದ ಉದ್ವಿಗ್ನತೆಯಿಂದಾಗಿ ಎರಡೂ ತಂಡಗಳ ಕ್ರಿಕೆಟ್ ಮಂಡಳಿಗಳು ನಿರ್ಧಾರ ಕೈಗೊಂಡಿವೆ.

ಟಿ20 ವಿಶ್ವಕಪ್ ನಂತರ ಉಭಯ ತಂಡಗಳು ಎದುರಿಸುತ್ತಿದ್ದ ವೈಟ್-ಬಾಲ್ ಸರಣಿಯಿಂದಲೇ ಇಬ್ರಾಹಿಂ ಜದ್ರಾನ್ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿಶ್ವಕಪ್ ಸೋಲಿನ ನಂತರ ರಶೀದ್ ಖಾನ್ ಅವರನ್ನು ನಾಯಕತ್ವದಿಂದ ಕೈ ಹಿಂಡಿಸಲಾಗಿದೆ.

ಎಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಸೀಬ್ ಖಾನ್ ತಿಳಿಸಿದ್ದಾರೆ:
"ವಿಮಾನಗಳು, ಲಾಜಿಸ್ಟಿಕ್ಸ್ ಮತ್ತು ಪ್ರಾದೇಶಿಕ ಪರಿಸ್ಥಿತಿಯಲ್ಲಿ ಸಮಸ್ಯೆಗಳಿದ್ದುದರಿಂದ ಲಂಕಾ ವಿರುದ್ಧದ ವೈಟ್-ಬಾಲ್ ಸರಣಿಯನ್ನು ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ಪಂದ್ಯ ಆಯೋಜನೆ ಕುರಿತು ಮಾತುಕತೆ ನಡೆಸಲಾಗುವುದು."


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-11 13:47:58
No Reviews