ಭ್ರಷ್ಟಾಚಾರ ಪ್ರಕರಣ: ನ್ಯಾಯಮೂರ್ತಿ ರಾಜೀನಾಮೆ

ನವದೆಹಲಿ: ಭ್ರಷ್ಟಾಚಾರ ಆರೋಪಗಳ ನಡುವೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ ಸಲ್ಲಿಸಿದ್ದು, ಸುದೀರ್ಘ ಕಾನೂನು ಹೋರಾಟದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಕಾರಣ ಉಲ್ಲೇಖಿಸದೇ, ತಕ್ಷಣದಿಂದಲೇ ಹುದ್ದೆ ತ್ಯಜಿಸಿರುವುದಾಗಿ ತಿಳಿಸಿದ್ದಾರೆ.

ದೆಹಲಿ ನಿವಾಸದಲ್ಲಿ ಪತ್ತೆಯಾದ ನೋಟುಗಳ ಕಂತೆಗಳ ವಿವಾದ, ಸುಪ್ರೀಂ ಕೋರ್ಟ್ ತನಿಖೆ ಹಾಗೂ ನಂತರದ ವರ್ಗಾವಣೆ ಈ ಪ್ರಕರಣಕ್ಕೆ ತೀವ್ರ ತಿರುವು ನೀಡಿತ್ತು. ಇದೀಗ ರಾಜೀನಾಮೆಯೊಂದಿಗೆ ಮಹಾಭಿಯೋಗ ಪ್ರಕ್ರಿಯೆಗೆ ತೆರೆ ಬೀಳುವ ಸಾಧ್ಯತೆ ಇದ್ದು, ನ್ಯಾಯಾಂಗ ವಲಯದಲ್ಲಿ ಸಂಚಲನ ಮೂಡಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-10 18:27:19
No Reviews