ತ್ರಿಶಾ ಪ್ರಶ್ನೆಗೆ ಮಾಳವಿಕಾ ಕೋಪ

ಬಹುಭಾಷಾ ನಟಿ ಮಾಳವಿಕಾ ಮೋಹನನ್ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳು ವಿಜಯ್ ಮತ್ತು ತ್ರಿಶಾ ಅವರ ವೈಯಕ್ತಿಕ ಜೀವನದ ಬಗ್ಗೆ ಕೇಳಿದ ಅನಗತ್ಯ ಮತ್ತು ಸನ್ಸೇಷನಲ್ ಪ್ರಶ್ನೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೆಲ ಪ್ರಶ್ನೆಗಳು ಕೀಳು ಅಭಿರುಚಿಯವಾಗಿದ್ದು ಗೌರವಪೂರ್ಣ ಪತ್ರಿಕೋದ್ಯಮ ಇರಬೇಕೆಂದು ಕೋರಿದ್ದಾರೆ. ದಳಪತಿ ವಿಜಯ್ ಅವರೊಂದಿಗೆ ತಮ್ಮ ಸ್ನೇಹ ಹಾಗೂ ವೃತ್ತಿಪರ ಗೌರವವನ್ನೂ ಅವರು ಸ್ಪಷ್ಟಪಡಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-18 12:26:20
No Reviews