ಅಮೆರಿಕ ವಿಶ್ವವಿದ್ಯಾಲಯದಿಂದ ಸುಧೀಂದ್ರ ವೆಂಕಟೇಶ್‌ಗೆ ಗೌರವ ಡಾಕ್ಟರೇಟ್

ಇದನ್ನೂ ಓದಿ: Samantha Ruth Prabhu : ರಾಜ್‌ನಿಂದ ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ರಾ ಸಮಂತಾ? ಸ್ಯಾಮ್ ಕೊಟ್ಟ ಸ್ಪಷ್ಟನೆ ಇದು

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆ ಪಡೆದ ದಿವಂಗತ ಡಿ.ವಿ. ಸುಧೀಂದ್ರ ಸ್ಥಾಪಿಸಿದ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ, ಕಳೆದ 50 ವರ್ಷಗಳಿಂದ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಭದ್ರ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಐದು ದಶಕಗಳ ಸಮೃದ್ಧ ಇತಿಹಾಸ ಹೊಂದಿರುವ ಈ ಸಂಸ್ಥೆ, ಸುಮಾರು 3000ಕ್ಕೂ ಹೆಚ್ಚು ಚಿತ್ರಗಳ ಪ್ರಚಾರದಲ್ಲಿ ಮಹತ್ವದ ಪಾತ್ರವಹಿಸಿ, ಈಶ್ವರಿ ಪ್ರೊಡಕ್ಷನ್ಸ್, ಕೆ.ಸಿ.ಎನ್ ಎಂಟರ್‌ಪ್ರೈಸಸ್, ರಾಕ್‌ಲೈನ್ ಪ್ರೊಡಕ್ಷನ್ಸ್, ಹೊಂಬಾಳೆ ಫಿಲ್ಮ್ಸ್, ಪರಂವಾ ಸ್ಟುಡಿಯೋಸ್, ರಿಷಭ್ ಶೆಟ್ಟಿ ಫಿಲ್ಮ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳೊಂದಿಗೆ ಕೆಲಸ ಮಾಡಿದೆ.

ದಿವಂಗತ ಸುಧೀಂದ್ರ ಅವರ ನಿಧನದ ಬಳಿಕ, ಸಂಸ್ಥೆಯ ಹೊಣೆಗಾರಿಕೆಯನ್ನು ಸುಧೀಂದ್ರ ವೆಂಕಟೇಶ್ ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಕಳೆದ 35ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರಚಾರಕರ್ತರಾಗಿ ಸಕ್ರಿಯ ಸೇವೆ ಸಲ್ಲಿಸುತ್ತಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-24 15:35:52
No Reviews