ಟ್ರೇಡ್ ಟೇಬಲ್‌ನಲ್ಲಿ ಭಾರತದ ಗೆಲುವು

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ದೂರವಾಣಿ ಮಾತುಕತೆ ಬಳಿಕ ಭಾರತ–ಅಮೆರಿಕ ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ.
ಭಾರತದ ಮೇಲಿನ ಪ್ರತಿ ಸುಂಕವನ್ನು 50%ರಿಂದ 18%ಕ್ಕೆ ಇಳಿಸುವ ಮೂಲಕ ಏಷ್ಯಾದಲ್ಲೇ ಅತಿ ಕಡಿಮೆ ಟಾರಿಫ್‌ ಪಡೆಯುವ ರಾಷ್ಟ್ರಗಳ ಪೈಕಿ ಭಾರತ ಸ್ಥಾನ ಪಡೆದಿದೆ.
ಮೋದಿಯವರ ತಾಳ್ಮೆ, ದೃಢ ನಿಲುವು ಮತ್ತು ರಾಷ್ಟ್ರೀಯ ಹಿತಾಸಕ್ತಿಯ ರಾಜಿಯಿಲ್ಲದ ರಾಜತಾಂತ್ರಿಕತೆ ಫಲ ನೀಡಿದ್ದು, ‘ಮೇಡ್‌ ಇನ್‌ ಇಂಡಿಯಾ’ ಉತ್ಪನ್ನಗಳಿಗೆ ಅಮೆರಿಕ ಮಾರುಕಟ್ಟೆಯಲ್ಲಿ ಹೊಸ ಬಾಗಿಲು ತೆರೆದಿದೆ.
ಈ ಒಪ್ಪಂದದಿಂದ ರಫ್ತು, ಹೂಡಿಕೆ, ವಿದೇಶಿ ವಿನಿಮಯ ಮತ್ತು ಎಂಎಸ್‌ಎಂಇ–ಸ್ಟಾರ್ಟಪ್‌ಗಳಿಗೆ ಭಾರಿ ಉತ್ತೇಜನ ಸಿಗಲಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-03 10:07:59
No Reviews