T20 ವರ್ಲ್ಡ್ ಕಪ್: ಅರ್ಷದೀಪ್‌ ಸಿಂಗ್‌ಗೆ ಮಿಚೆಲ್‌ಗೆ ಥ್ರೋ – ದಂಡ ಹೇರಿಕೆ!

IND vs NZ: T20 World Cup 2026 – ಅರ್ಷದೀಪ್ ಸಿಂಗ್‌ಗೆ ICC ದಂಡ

ನ್ಯೂಜಿಲೆಂಡ್ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡದ ಯುವ ವೇಗಿ ಅರ್ಶದೀಪ್ ಸಿಂಗ್ (Arshdeep Singh) ಆಘಾತಕಾರಿ ಘಟನೆಗೆ ಕಾರಣರಾಗಿದ್ದರು. ಕಿವೀಸ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ (Daryl Mitchell) ಅವರ ಬಳಿ ಅವರು ಅನಗತ್ಯವಾಗಿ ಚೆಂಡು ಥ್ರೋ ಮಾಡಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಮಾರ್ಚ್ 10ರಂದು ಐಸಿಸಿ ಈ ಘಟನೆಯ ಕುರಿತು ನಿರ್ಧಾರವನ್ನು ಪ್ರಕಟಿಸಿದ್ದು, ಅರ್ಷದೀಪ್ ಸಿಂಗ್‌ಗೆ ಶೇ 15 ರಷ್ಟು ಪಂದ್ಯ ಸಂಭಾವನೆ ದಂಡವನ್ನು ವಿಧಿಸಿದೆ. ಈ ಪ್ರಕರಣ ಐಸಿಸಿ ನಡವಳಿಕೆ ಸಂಹಿತೆಯ ಲೆವೆಲ್ 1 ಉಲ್ಲಂಘನೆಗೆ ಸೇರಿದೆ. ನಿಯಮ 2.9 ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟಗಾರನ ಬಳಿ ಅಥವಾ ಅವರ ಸಮೀಪಕ್ಕೆ ಅಪಾಯಕಾರಿಯಾದ/ಅಸಮರ್ಪಕವಾಗಿ ಚೆಂಡು ಎಸೆಯಬಾರದು.

ದಂಡದ ಜೊತೆಗೆ ಅರ್ಷದೀಪ್ ಅವರಿಗೆ ಒಂದು ಡೀಮೆರಿಟ್ ಅಂಕ ಕೂಡ ನೀಡಲಾಗಿದೆ. ಇದು ಮುಂದಿನ 24 ತಿಂಗಳಲ್ಲಿ ಅವರ ಮೊದಲ ಪ್ರಮಾದವಾಗಿದೆ. ಐಸಿಸಿ ಅಧಿಕಾರಿಗಳು ತೆಗೆದುಕೊಂಡ ತೀರ್ಪನ್ನು ಅರ್ಷದೀಪ್ ಒಪ್ಪಿಕೊಂಡಿದ್ದು, ಅವರು ಯಾವುದೇ ಪ್ರತ್ಯೇಕ ವಿಚಾರಣೆಯಲ್ಲಿ ಭಾಗವಹಿಸುವ ಅಗತ್ಯವಿಲ್ಲ.

ಪಂದ್ಯದ ಬಳಿಕ, ಅರ್ಷದೀಪ್ ಸಿಂಗ್ ಮತ್ತು ಡ್ಯಾರಿಲ್ ಮಿಚೆಲ್ ಅವರ ಕ್ಷಮೆಯಾಚನೆ ಹಾಗೂ ಸ್ನೇಹಪೂರ್ಣ ಕ್ಷಣ ವೈರಲ್ ವಿಡಿಯೋ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು.

ಅಂದಕ್ಕೂ, ಭಾರತ ತಂಡ 96 ರನ್ ಅಂತರದಿಂದ ಗೆದ್ದು ಮೂರನೇ ಬಾರಿ T20 ವಿಶ್ವಕಪ್‌ ಪ್ರಶಸ್ತಿ ಮುಡಿಗೇರಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-10 17:35:02
No Reviews