ಸಿನಿಮಾ ಹಾಡಿಗೆ ಶಿಲ್ಪಾ ಗಣೇಶ್ ಎಂಟ್ರಿ

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ತಮ್ಮದೇ ಆದ ಗುರುತು ಮೂಡಿಸಿರುವ ಶಿಲ್ಪಾ ಗಣೇಶ್ ಇದೀಗ ತುಳು ಸಿನಿಮಾರಂಗದಲ್ಲೂ ಹೊಸ ಹೆಜ್ಜೆ ಇಟ್ಟಿದ್ದಾರೆ. ತುಳು ಮತ್ತು ಕನ್ನಡದಲ್ಲಿ ನಿರ್ಮಾಣವಾಗಿರುವ ‘ಪಿಚ್ಚರ್’ ಸಿನಿಮಾ ಜುಲೈ 24ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದ ಮೂಲಕ ಅವರು ಗಾಯಕಿಯಾಗಿಯೂ ಪರಿಚಯವಾಗುತ್ತಿದ್ದಾರೆ. ‘ಗೋಕುಲದ ರಾಧೆ’ ಹಾಡಿಗೆ ಶಿಲ್ಪಾ ಗಣೇಶ್ ಧ್ವನಿ ನೀಡಿದ್ದು, ಅವರ ಕಂಠಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಂದೀಪ್ ಬೆದ್ರ ನಿರ್ದೇಶನದ ಈ ಸಿನಿಮಾದ ಹಾಡುಗಳನ್ನು ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ತುಳು ಚಿತ್ರರಂಗಕ್ಕೆ ಹೊಸ ಮೆರುಗು ತರುವ ಉದ್ದೇಶ ಹೊಂದಿರುವ ಶಿಲ್ಪಾ ಗಣೇಶ್, ಭಾವನಾತ್ಮಕ ಮೌಲ್ಯಗಳಿರುವ ಕಥೆಗಳತ್ತ ಒಲವು ತೋರಿಸುತ್ತಿದ್ದು, ‘ಪಿಚ್ಚರ್’ ಚಿತ್ರದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-18 16:40:06
No Reviews