ಸಾನ್ವಿ ಸುದೀಪ್ ಕಂಠಕ್ಕೆ ಫಿದಾ ಆದ ಸಲ್ಮಾನ್

ಬಾಲಿವುಡ್ ಸೂಪರ್‌ಸ್ಟಾರ್ Salman Khan ಅವರಿಗೆ Kiccha Sudeep ಮೇಲೆ ವಿಶೇಷ ಪ್ರೀತಿ ಇದೆ. ‘Dabangg 3’ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರಿಂದ ಈ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ಇತ್ತೀಚೆಗೆ ‘ಮಾರ್ಕ್’ ಚಿತ್ರದ ಪಾರ್ಟಿ ಸಾಂಗ್ ‘ಮಸ್ತ್ ಮಲೈಕಾ’ ಹಾಡಿನ ಲಿಂಕ್ ಅನ್ನು ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿ, “ಸುಂದರವಾದ ಹಾಡು, ಒಳ್ಳೆಯದಾಗಲಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸ್ಟೋರಿಯಲ್ಲಿ ಕಿಚ್ಚ ಸುದೀಪ್ ಹಾಗೂ ಅವರ ಮಗಳು Saanvi Sudeep ಅವರನ್ನು ಟ್ಯಾಗ್ ಮಾಡಿರುವುದು ವಿಶೇಷ. ಇದಕ್ಕೆ ಪ್ರತಿಕ್ರಿಯಿಸಿದ ಸಾನ್ವಿ, “ಎಂತಹ ಅದ್ಭುತ ಗೌರವ. ಧನ್ಯವಾದಗಳು ಸಲ್ಮಾನ್ ಸರ್” ಎಂದು ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಸಾನ್ವಿ ಕಂಠಕ್ಕೆ ಸುದೀಪ್ ಬೊಂಬಾಟ್ ಸ್ಟೆಪ್ಸ್

ಮಗಳ ಮೊದಲ ಹಾಡಾದ ‘ಮಸ್ತ್ ಮಲೈಕಾ’ಗೆ ಕಿಚ್ಚ ಸುದೀಪ್ ಬೊಂಬಾಟ್ ಸ್ಟೆಪ್ಸ್ ಹಾಕಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಸಿನಿಮಾ ಅಥವಾ ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಸಾನ್ವಿ ಕನಸಿನತ್ತ ಧೈರ್ಯವಾಗಿ ಹೆಜ್ಜೆ ಇಡುತ್ತಿದ್ದಾರೆ. ಈ ಹಿಂದೆ ತೆಲುಗು ನಟ Nani ಅಭಿನಯದ ‘HIT 3’ ಚಿತ್ರದ ಥೀಮ್ ಸಾಂಗ್ *‘ಪೊರಟಮೆ 3.0’*ಗೆ ಧ್ವನಿ ನೀಡುವ ಮೂಲಕ ಅವರು ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದರು.

ಇದಕ್ಕೂ ಮೊದಲು, ಸಲ್ಮಾನ್ ಖಾನ್ ಅವರು Raj B. Shetty ಅಭಿನಯದ ‘Rakkasapuradoll’ ಸಿನಿಮಾವನ್ನು ಮೆಚ್ಚಿ, ಅದರ ಹಿಂದಿ ಆವೃತ್ತಿಯ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದೂ ಗಮನಾರ್ಹ.

ಸದ್ಯ ಸಲ್ಮಾನ್ ಖಾನ್ ‘Galwan’ ಸಿನಿಮಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. Salman Khan Films ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಅಪೂರ್ವ ಲಖಿಯಾ ನಿರ್ದೇಶಿಸುತ್ತಿದ್ದು, ಬಿಡುಗಡೆ ದಿನಾಂಕವನ್ನು ಏಪ್ರಿಲ್ 17ರಿಂದ ಆಗಸ್ಟ್ 14, 2026ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-17 12:04:09
No Reviews