ಮೈಸೂರು ಸಿಲ್ಕ್‌ನಲ್ಲಿ ರಶ್ಮಿಕಾ ಸೌಂದರ್ಯ ಕಂಗೊಳಿಸಿದೆ

ರಶ್ಮಿಕಾ ಮಂದಣ್ಣ ಉಟ್ಟ ಮೈಸೂರು ಸಿಲ್ಕ್ ಸೀರೆ ಎಲ್ಲರ ಗಮನ ಸೆಳೆದಿದೆ.
ಮಾಧುರ್ಯಾ ಕ್ರಿಯೇಷನ್ ವೀವ್ ಮಾಡಿದ ಈ ಕೆಂಪು ಮೈಸೂರು ಸಿಲ್ಕ್ ಸೀರೆಯನ್ನು ಮೋನಿಕಾ ಮತ್ತು ಕರೀಷ್ಮಾ ಅವರ JADE ಬ್ರಾಂಡ್ ಡಿಸೈನ್ ಮಾಡಿದ್ದು, ಸರಳತೆಯಲ್ಲೇ ಸೊಬಗು ಮೆರೆದಿದೆ.

ಕಪ್ಪು ಮಲ್ಟಿ ಲೈನ್ಸ್ ಬಾರ್ಡರ್ ಹಾಗೂ ಮಿನುಗುವ ಡಿಸೈನರ್ ಬಾರ್ಡರ್ ಸೀರೆಯ ಸೌಂದರ್ಯವನ್ನು ಹೆಚ್ಚಿಸಿದೆ. ಹೈ ನೆಕ್ ಬ್ಲೌಸ್‌ಗೆ ಸಿಂಪಲ್ ಗೋಲ್ಡನ್ ಲೈನಿಂಗ್ ನೀಡಲಾಗಿದ್ದು, ಹಿಂಭಾಗದಲ್ಲಿ ಕರ್ನಾಟಕದ ಪ್ರತಿಷ್ಠೆಯ ಸಂಕೇತವಾದ ಗಂಡ-ಭೇರುಂಡ ಎಂಬ್ರಾಯ್ಡರಿ ಹಾಗೂ ಕೊಡವರ ಗೌರವದ ಸಂಕೇತವಾದ ಕತ್ತಿಗಳ ವಿನ್ಯಾಸ ವಿಶೇಷತೆ ತಂದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-05 16:33:10
No Reviews