ರಾಸಲೀಲೆ ವಿಡಿಯೋ ಬಹಿರಂಗ ಡಿಜಿಪಿ ರಾಮಚಂದ್ರ ರಾವ್ ಅಮಾನತು ಶಾಕ್!

ಕೆ. ರಾಮಚಂದ್ರ ರಾವ್ ಅವರು ಸರ್ಕಾರಿ ನೌಕರರಿಗೆ ಶೋಭೆಯಲ್ಲದ ರೀತಿಯಲ್ಲಿ, ಅಶ್ಲೀಲವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪಗಳು ಸರ್ಕಾರಕ್ಕೆ ಮುಜುಗರ ಉಂಟುಮಾಡಿವೆ. ಈ ಹಿನ್ನೆಲೆ ಪ್ರಕರಣದ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅಧಿಕಾರಿಯ ವರ್ತನೆ ಅಖಿಲ ಭಾರತ ಸೇವೆಗಳ ನಡತೆ ನಿಯಮಗಳು–1968ರ ನಿಯಮ 3ರ ಉಲ್ಲಂಘನೆಯಾಗಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ತನಿಖೆ ಬಾಕಿ ಇರುವುದರಿಂದ ಅಖಿಲ ಭಾರತ ಸೇವೆಗಳ ಶಿಸ್ತು ಮತ್ತು ಮೇಲ್ಮನವಿ ನಿಯಮಗಳು–1969ರ ನಿಯಮ  ಅಡಿಯಲ್ಲಿ ಡಾ. ಕೆ. ರಾಮಚಂದ್ರ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಮಚಂದ್ರ ರಾವ್ ಹೇಳಿದ್ದೇನು?
ವಿಡಿಯೋ ವೈರಲ್ ಆಗುತ್ತಿದ್ದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರೂ, ಅನಾರೋಗ್ಯದ ಕಾರಣದಿಂದ ಭೇಟಿಗೆ ಅವಕಾಶ ಸಿಗಲಿಲ್ಲ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ವಿಡಿಯೋ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅದು ಕೃತಕವಾಗಿ ಸೃಷ್ಟಿಸಿದದ್ದು. ಈ ಕುರಿತು ತನಿಖೆ ನಡೆಯಬೇಕು” ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಮಹಿಳೆಯರೊಂದಿಗೆ ಸರಸವಾಡುತ್ತಿರುವ ದೃಶ್ಯಗಳು ಹಾಗೂ ಮಹಿಳೆಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಎರಡು ಆಡಿಯೋಗಳು ವೈರಲ್ ಆಗಿವೆ. ಪೊಲೀಸ್ ಸಮವಸ್ತ್ರದಲ್ಲೇ ಮಹಿಳೆಯನ್ನು ಮುದ್ದಾಡಿ, ಚುಂಬಿಸಿರುವ ಸುಮಾರು 47 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೂರು ಪ್ರತ್ಯೇಕ ಕ್ಲಿಪ್‌ಗಳನ್ನು ಸೇರಿಸಿ ಈ ವಿಡಿಯೋ ರಚಿಸಲಾಗಿದೆ ಎನ್ನಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-20 10:34:25
No Reviews