ತಲೈವಾ ಸ್ಟೈಲ್‌ನ ಹಿಂದಿದೆ ಕನ್ನಡದ ಕನೆಕ್ಷನ್!

ಅದರಲ್ಲೂ ಅವರು ಸಿಗರೇಟನ್ನು ಗಾಳಿಯಲ್ಲಿ ಚಿಮ್ಮಿಸಿ ಬಾಯಿಗೆ ಹಾಕಿಕೊಳ್ಳುವ ಸ್ಟೈಲ್ ದಶಕಗಳಿಂದಲೂ ಜನಪ್ರಿಯ. ಆದರೆ, ವಿಶ್ವದಾದ್ಯಂತ ಸದ್ದು ಮಾಡಿದ ಈ ವಿಶಿಷ್ಟ ಸ್ಟೈಲ್‌ನ ಮೂಲ ಇರುವುದು ನಮ್ಮ ಕನ್ನಡದ ನೆಲದಲ್ಲಿ ಎಂಬುದು ವಿಶೇಷ. ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ದಿನಗಳಲ್ಲಿ, ಕನ್ನಡದ 'ರೆಬೆಲ್ ಸ್ಟಾರ್' ಅಂಬರೀಶ್ ಅವರ ನಟನೆಯನ್ನು ನೋಡಿ ಈ ಸ್ಟೈಲ್ ಅನ್ನು ಕಲಿತಿದ್ದರು.

1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದಲ್ಲಿ ಅಂಬರೀಶ್ ಅವರು 'ಜಲೀಲ'ನ ಪಾತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಆ ಚಿತ್ರದ ಪ್ರಸಿದ್ಧ ಸನ್ನಿವೇಶವೊಂದರಲ್ಲಿ ಅಂಬರೀಶ್ "ಕ್ಯಾರೆ ಬುಲ್ ಬುಲ್ ಮಾತಾಡಕಿಲ್ವ" ಎಂದು ಹೇಳುತ್ತಾ ಸಿಗರೇಟನ್ನು ಸ್ಟೈಲಿಶ್ ಆಗಿ ಬಾಯಿಗೆ ಎಸೆದುಕೊಳ್ಳುತ್ತಾರೆ. ಈ ದೃಶ್ಯವನ್ನು ನೋಡಿ ಮಾರುಹೋಗಿದ್ದ ರಜನಿಕಾಂತ್, ಅಂದೇ ಅಂಬರೀಶ್ ಅವರ ದೊಡ್ಡ ಅಭಿಮಾನಿಯಾದರಲ್ಲದೆ, ಅದೇ ಸ್ಟೈಲ್ ಅನ್ನು ತಾವೂ ಕರಗತ ಮಾಡಿಕೊಂಡರು. ನಂತರ ತಮಿಳು ಚಿತ್ರರಂಗಕ್ಕೆ ಪ್ರವೇಶ ಪಡೆದಾಗ ಇದೇ ಮ್ಯಾನರಿಸಂ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿತು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-18 15:39:23
No Reviews