ರೈಲು ಪ್ರಯಾಣಕ್ಕೆ ಹೊಸ ಅಧ್ಯಾಯ ವಂದೇ ಭಾರತ್ ಸ್ಲೀಪರ್ ಉದ್ಘಾಟನೆ

ಆಧುನಿಕ ಭಾರತದ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳಿಗೆ ಉತ್ತರವಾಗಿ ರೂಪುಗೊಂಡಿರುವ ವಂದೇ ಭಾರತ್ ಸ್ಲೀಪರ್ ರೈಲು, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಕಡಿಮೆ ದರದಲ್ಲಿ ವಿಮಾನಯಾನದಂತಹ ಪ್ರೀಮಿಯಂ ಪ್ರಯಾಣ ಅನುಭವ ನೀಡಲಿದೆ
ವೇಗ, ಸುರಕ್ಷತೆ ಮತ್ತು ಆರಾಮವನ್ನು ಒಟ್ಟುಗೂಡಿಸಿರುವ ಈ ರೈಲು ಹೌರಾ–ಕಾಮಾಖ್ಯ ಮಾರ್ಗದಲ್ಲಿ ಪ್ರಯಾಣ ಸಮಯವನ್ನು ಸುಮಾರು 2.5 ಗಂಟೆಗಳಷ್ಟು ಕಡಿಮೆ ಮಾಡಿ, ಧಾರ್ಮಿಕ ಯಾತ್ರೆ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬಲಿದೆ.

ಮಿಂಚಿನ ವೇಗ, ಎರ್ಗೋನಾಮಿಕ್ ಬರ್ತ್‌ಗಳು, ವಿಶ್ವಮಟ್ಟದ ಸಸ್ಪೆನ್ಶನ್ ವ್ಯವಸ್ಥೆ, ಶೇ.99 ಸೂಕ್ಷ್ಮಾಣು ನಾಶಕ ಸ್ವಚ್ಛತಾ ತಂತ್ರಜ್ಞಾನ ಮತ್ತು ‘ಕವಚ್’ ರಕ್ಷಣಾ ವ್ಯವಸ್ಥೆಯೊಂದಿಗೆ ಇದು ಭದ್ರತೆಯಲ್ಲೂ ಮುಂಚೂಣಿಯಲ್ಲಿದೆ. ಸ್ವಯಂಚಾಲಿತ ಬಾಗಿಲುಗಳು ಹಾಗೂ ನಿರಂತರ ನಿಗಾ ವ್ಯವಸ್ಥೆ ಪ್ರಯಾಣವನ್ನು ಇನ್ನಷ್ಟು ಸುರಕ್ಷಿತಗೊಳಿಸುತ್ತವೆ.

ಇದಲ್ಲದೆ, ಟಿಕೆಟ್ ದರದಲ್ಲೇ ಸೇರಿಸಿರುವ ಕ್ಯಾಟರಿಂಗ್ ಸೇವೆಯ ಮೂಲಕ ಸ್ಥಳೀಯ ಅಸ್ಸಾಂ ಮತ್ತು ಬೆಂಗಾಲಿ ಖಾದ್ಯಗಳ ಸವಿಯೊಂದಿಗೆ, 3 ಎಸಿ ರಿಂದ 1 ಎಸಿ ತನಕ ₹2,300 ರಿಂದ ₹3,600 ದರದಲ್ಲಿ ಲಭ್ಯವಾಗುವ ಈ ರೈಲು ಭಾರತೀಯ ರೈಲು ಪ್ರಯಾಣಕ್ಕೆ ಹೊಸ ಮಾನದಂಡವನ್ನು ಸ್ಥಾಪಿಸಿದೆ


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-17 18:50:06
No Reviews