ಬೆಂಗಳೂರಿಗರಿಗೆ ಎಚ್ಚರಿಕೆ! ನಾಳೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಫೆ.11ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

ಕೆಪಿಟಿಸಿಎಲ್ ಹೆಬ್ಬಾಳ ವಿಭಾಗದ 66/11 ಕೆವಿಎ ಸಹಕಾರ ನಗರ ಸಬ್‌ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಫೆಬ್ರವರಿ 11ರಂದು (ಬುಧವಾರ) ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು

ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರ–ಅಮೃತಹಳ್ಳಿ, ಅಮೃತಹಳ್ಳಿ ಬಿ, ಸಿ, ಡಿ ಬ್ಲಾಕ್‌ಗಳು, ಸಿಕ್ಯುಎಎಲ್ ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಸರ್ವೋದಯ ನಗರ–2, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರ–ಜಕ್ಕೂರು, ವಿಆರ್‌ಎಲ್ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.


ವಿದ್ಯುತ್ ಸಮಸ್ಯೆಗೆ 1912 ಅಥವಾ ವಾಟ್ಸ್‌ಆಪ್ ಮೂಲಕ ದೂರು ನೀಡಿ: ಬೆಸ್ಕಾಂ

ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ರೈತರು ಹಾಗೂ ಸಾರ್ವಜನಿಕರು ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಿ ದೂರು ದಾಖಲಿಸಬಹುದು. ರೈತರ ಹೊಲ-ಗದ್ದೆಗಳಲ್ಲಿ ಇರುವ ವಿದ್ಯುತ್ ಪರಿವರ್ತಕಗಳಲ್ಲಿ ದೋಷ ಉಂಟಾದರೂ ಕೂಡ ತಕ್ಷಣವೇ ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

1912 ಸಹಾಯವಾಣಿ ಲಭ್ಯವಾಗದಿದ್ದಲ್ಲಿ, ತಮ್ಮ ಜಿಲ್ಲೆಗೆ ಸಂಬಂಧಿಸಿದ ವಾಟ್ಸ್‌ಆಪ್ ಸಹಾಯವಾಣಿ ಸಂಖ್ಯೆಗಳಿಗೆ ದೂರುಗಳನ್ನು ಕಳುಹಿಸಬಹುದಾಗಿದೆ.

ವಾಟ್ಸ್‌ಆಪ್ ಸಹಾಯವಾಣಿ ಸಂಖ್ಯೆಗಳು

ಬೆಂಗಳೂರು ನಗರ ಜಿಲ್ಲೆ
• ದಕ್ಷಿಣ ವೃತ್ತ: 8277884011
• ಪಶ್ಚಿಮ ವೃತ್ತ: 8277884012
• ಪೂರ್ವ ವೃತ್ತ: 8277884013
• ಉತ್ತರ ವೃತ್ತ: 8277884014

ಇತರೆ ಜಿಲ್ಲೆಗಳು
• ಕೋಲಾರ: 8277884015
• ಚಿಕ್ಕಬಳ್ಳಾಪುರ: 8277884016
• ಬೆಂಗಳೂರು ಗ್ರಾಮಾಂತರ: 8277884017
• ರಾಮನಗರ: 8277884018
• ತುಮಕೂರು: 8277884019
• ಚಿತ್ರದುರ್ಗ: 8277884020
• ದಾವಣಗೆರೆ: 8277884021

ಸಹಾಯವಾಣಿ ಅಥವಾ ವಾಟ್ಸ್‌ಆಪ್ ಮೂಲಕ ದೂರು ಸಲ್ಲಿಸಿದ ತಕ್ಷಣ, 1912 ಕೇಂದ್ರದ ಗ್ರಾಹಕ ಸೇವಾ ಪ್ರತಿನಿಧಿಗಳು ಸಂಬಂಧಿಸಿದ ಬೆಸ್ಕಾಂ ಉಪವಿಭಾಗಗಳಿಗೆ ಮಾಹಿತಿ ರವಾನಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-10 16:36:31
No Reviews