ಪಾಕಿಸ್ತಾನ ವಿಜಯದೊಂದಿಗೆ ಸೂಪರ್‌–8 ಖಚಿತ, ಯುಎಸ್‌ಎ ಹೊರಗೆ!

ಕೊಲಂಬೊ: ಸಾಹಿಬ್‌ಝಾದ ಫರ್ಹಾನ್ ಅವರ ಭರ್ಜರಿ ಶತಕ ಹಾಗೂ ಉಸ್ಮಾನ್‌ ತಾರಿಖ್‌ಶದಾಬ್‌ ಖಾನ್‌ ಅವರ ಸ್ಪಿನ್‌ ಮ್ಯಾಜಿಕ್‌ ನೆರವಿನಿಂದ ಪಾಕಿಸ್ತಾನ ತಂಡ, ಕೊನೆಯ ಲೀಗ್‌ ಪಂದ್ಯದಲ್ಲಿ ನಮೀಬಿಯಾ ವಿರುದ್ಧ 102 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸಲ್ಮಾನ್‌ ಅಲಿ ಆಘಾ ನಾಯಕತ್ವದ ಪಾಕ್‌, 2026ರ ಐಸಿಸಿ ಟಿ20 ವಿಶ್ವಕಪ್ ಸೂಪರ್‌–8 ಹಂತಕ್ಕೆ ಅರ್ಹತೆ ಪಡೆದರೆ, ಪಾಕ್‌ ಸೋಲಿನ ನಿರೀಕ್ಷೆಯಲ್ಲಿದ್ದ ಯುಎಸ್‌ಎ ಅಧಿಕೃತವಾಗಿ ಟೂರ್ನಿಯಿಂದ ಹೊರನಡೆದಿತು; ನಮೀಬಿಯಾ ಮಾತ್ರ ಒಂದೂ ಜಯವಿಲ್ಲದೆ ತನ್ನ ಅಭಿಯಾನಕ್ಕೆ ತೆರೆ ಎಳೆದಿತು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-18 18:43:17
No Reviews