ಹಬ್ಬದಂದೇ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ: ಇಂದಿನಿಂದ ಕ್ಯೂಆರ್ ಆಧಾರಿತ ಪಾಸ್ ಸೌಲಭ್ಯ

ಇಂದಿನಿಂದ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ 1 ದಿನ, 3 ದಿನ ಹಾಗೂ 5 ದಿನಗಳ ಅನಿಯಮಿತ ಪ್ರಯಾಣ ಪಾಸ್ ಲಭ್ಯವಾಗಲಿದೆ. ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ BMRCL ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಇದುವರೆಗೆ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್ ಮೂಲಕ ಮಾತ್ರ ಅನಿಯಮಿತ ಪ್ರಯಾಣ ಪಾಸ್ ಲಭ್ಯವಿದ್ದು, ಅದಕ್ಕಾಗಿ 50 ರೂ. ಭದ್ರತಾ ಠೇವಣಿ ಪಾವತಿಸಬೇಕಾಗುತ್ತಿತ್ತು. ಇದೀಗ ಮೊಬೈಲ್‌ನಲ್ಲೇ ಕ್ಯೂಆರ್ ಕೋಡ್ ಬಳಸಿ ಪಾಸ್ ಪಡೆಯಬಹುದಾಗಿದ್ದು, ಯಾವುದೇ ಭದ್ರತಾ ಠೇವಣಿ ಅಗತ್ಯವಿಲ್ಲ.

ಬೆಲೆ ವಿವರ ಹೀಗಿದೆ:
1 ದಿನದ ಮೆಟ್ರೋ ಪ್ರಯಾಣ ಪಾಸ್‌ಗೆ 250 ರೂ.,
3 ದಿನಗಳ ಪಾಸ್‌ಗೆ 550 ರೂ.
ಮತ್ತು 5 ದಿನಗಳ ಅನಿಯಮಿತ ಪ್ರಯಾಣ ಪಾಸ್‌ಗೆ 850 ರೂ. ನಿಗದಿಪಡಿಸಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-15 13:25:51
No Reviews