ಬಾಕ್ಸ್ ಆಫೀಸ್ ಸುನಾಮಿ 45 ದಿನಗಳಲ್ಲಿ ತೆರೆಗೆ ಬರಲಿವೆ 6 ಬೃಹತ್ ಸಿನಿಮಾಗಳು!

ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಬರೋಬ್ಬರಿ ಆರು ದೊಡ್ಡ ಬಜೆಟ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿವೆ. ಈ ಚಿತ್ರಗಳ ಮೇಲೆ ಒಟ್ಟಾರೆಯಾಗಿ ₹1020 ರಿಂದ ₹1550 ಕೋಟಿ ರೂಪಾಯಿವರೆಗೆ ಬಂಡವಾಳ ಹೂಡಲಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಸುನಾಮಿಯೇ ಏಳುವ ಲಕ್ಷಣಗಳು ಕಾಣುತ್ತಿವೆ

ಪ್ರಮುಖ ಸಿನಿಮಾಗಳ ವಿವರ ಮತ್ತು ಬಿಡುಗಡೆ ದಿನಾಂಕ:

ಸಿನಿಮಾ ಬಿಡುಗಡೆ ದಿನಾಂಕ ತಾರಾಗಣ ಅಂದಾಜು ಬಜೆಟ್
ಧುರಂಧರ್ : ದಿ ರಿವೆಂಜ್ 19 ಮಾರ್ಚ್ 2026 ರಣವೀರ್ ಸಿಂಗ್, ಸಂಜಯ್ ದತ್ ಮೊದಲ ಭಾಗದ ಜೊತೆ ಶೂಟಿಂಗ್ (0 ಬಜೆಟ್*)
ಟಾಕ್ಸಿಕ್ 19 ಮಾರ್ಚ್ 2026 ಯಶ್, ನಯನತಾರಾ, ಕಿಯಾರಾ ₹300 - ₹600 ಕೋಟಿ
ಭೂತ್ ಬಂಗ್ಲಾ 10 ಏಪ್ರಿಲ್ 2026 ಅಕ್ಷಯ್ ಕುಮಾರ್, ಟಬು ₹120 - ₹300 ಕೋಟಿ
ಬ್ಯಾಟಲ್ ಆಫ್ ಗಲ್ವಾನ್ 17 ಏಪ್ರಿಲ್ 2026 ಸಲ್ಮಾನ್ ಖಾನ್, ಚಿತ್ರಾಂಗದಾ ಸಿಂಗ್ ₹200 - ₹250 ಕೋಟಿ
ಪೆಡ್ಡಿ 30 ಏಪ್ರಿಲ್ 2026 ರಾಮ್ ಚರಣ್, ಜಾನ್ವಿ ಕಪೂರ್ ₹300 ಕೋಟಿ

 

  • ಯಶ್ vs ರಣವೀರ್ ಸಿಂಗ್: ಮಾರ್ಚ್ 19 ರಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್' ಮತ್ತು ಬಾಲಿವುಡ್‌ನ ಸ್ಪೈ ಥ್ರಿಲ್ಲರ್ 'ಧುರಂಧರ್: ದಿ ರಿವೆಂಜ್' ನೇರ ಹಣಾಹಣಿಗೆ ಇಳಿಯಲಿವೆ. 'ಟಾಕ್ಸಿಕ್' ಚಿತ್ರದಲ್ಲಿ ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

  • ಅಕ್ಷಯ್ ಕುಮಾರ್ ಅವರ ಹಾರರ್ ಕಾಮಿಡಿ: ಪ್ರಿಯದರ್ಶನ್ ನಿರ್ದೇಶನದ 'ಭೂತ್ ಬಂಗ್ಲಾ' ಮೂಲಕ ಅಕ್ಷಯ್ ಕುಮಾರ್ ಮತ್ತೆ ಹಾರರ್ ಕಾಮಿಡಿ ಜಾನರ್‌ಗೆ ಮರಳುತ್ತಿದ್ದಾರೆ. ಇದು ಏಪ್ರಿಲ್ 10 ರಂದು ತೆರೆಕಾಣಲಿದೆ.

  • ಸಲ್ಮಾನ್ ಖಾನ್ ಅವರ ಯುದ್ಧ ಕಥೆ: ಸತ್ಯ ಘಟನೆಯನ್ನು ಆಧರಿಸಿದ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ದೇಶಪ್ರೇಮದ ಕಿಚ್ಚು ಹಚ್ಚಲಿದ್ದಾರೆ.

  • ರಾಮ್ ಚರಣ್ ಸ್ಪೋರ್ಟ್ಸ್ ಆಕ್ಷನ್: ಏಪ್ರಿಲ್ ಅಂತ್ಯಕ್ಕೆ ರಾಮ್ ಚರಣ್ ಮತ್ತು ಶಿವ ರಾಜ್‌ಕುಮಾರ್ ಅಭಿನಯದ 'ಪೆಡ್ಡಿ' ಸಿನಿಮಾ ಕ್ರೀಡಾ ಮತ್ತು ಆಕ್ಷನ್ ಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-09 12:45:22
No Reviews