ಕೃಣಾಲ್ ಪಾಂಡ್ಯ ಬೌನ್ಸರ್‌ಗೆ ಕಾವ್ಯ ಮಾರನ್ ರಿಯಾಕ್ಷನ್

ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ PL 2026 ಪಂದ್ಯದಲ್ಲಿ ಆತಿಥೇಯ Sunrisers Hyderabad ತಂಡವು Royal Challengers Bengaluru ವಿರುದ್ಧ 55 ರನ್ ಅಂತರದ ಭರ್ಜರಿ ಜಯ ಸಾಧಿಸಿತು. ಈ ಪಂದ್ಯವು ಹೈ ಸ್ಕೋರಿಂಗ್ ಮ್ಯಾಚ್ ಆಗಿ ಅಭಿಮಾನಿಗಳ ಗಮನ ಸೆಳೆದಿತು.

ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸೆನ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ 4 ವಿಕೆಟ್‌ಗೆ 255 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ ಉತ್ತಮ ಆರಂಭ ಪಡೆದರೂ, ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ 200 ರನ್‌ಗಳಿಗೆ ಸೀಮಿತವಾಯಿತು.

ಆದರೆ ಪಂದ್ಯಕ್ಕಿಂತ ಹೆಚ್ಚು ಚರ್ಚೆಗೆ ಕಾರಣವಾದದ್ದು ಸ್ಪಿನ್ನರ್ Krunal Pandya ಅವರ ಬೌಲಿಂಗ್ ಶೈಲಿ. ಸತತ ಎರಡು ಬೌನ್ಸರ್ ಎಸೆತಗಳನ್ನು ಅವರು ಪ್ರಯೋಗಿಸಿದ ದೃಶ್ಯಗಳು ಗ್ಯಾಲರಿಯಲ್ಲಿ ಕುಳಿತಿದ್ದ Kavya Maran ಅವರ ಗಮನ ಸೆಳೆದವು. ಅವರು ಸಹ ಸಿಬ್ಬಂದಿಗಳೊಂದಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ಪಿನ್ನರ್ ಆಗಿದ್ದರೂ ಗಂಟೆಗೆ 120 130 ಕಿ.ಮೀ ವೇಗದಲ್ಲಿ ಬೌನ್ಸರ್ ಎಸೆಯುತ್ತಿರುವ ಕೃಣಾಲ್ ಅವರ ಶೈಲಿಯ ಬಗ್ಗೆ ಈಗಾಗಲೇ ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಪಂದ್ಯದ ಘಟನೆ ನಂತರ ಈ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.

ಕಾವ್ಯಾ ಮಾರನ್ ಅವರ ಪ್ರತಿಕ್ರಿಯೆಯ ಕ್ಷಣಗಳು ಮತ್ತು ಪಂದ್ಯದ ಹೈಲೈಟ್ಸ್ ಎರಡೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಈ ಪಂದ್ಯವನ್ನು ಮತ್ತಷ್ಟು ಚರ್ಚೆಗೆ ಗ್ರಾಸ ಮಾಡಿವೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-23 12:04:53
No Reviews