ʻಲೂಸ್ ಮಾದʼ ಯೋಗಿ ಈಗ ʻಕರುನಾಡ ಕಿಂಗ್

ಯೋಗಿ ಬಗ್ಗೆ ಶಿವಣ್ಣನ ಮನದ ಮಾತು

“‘ಕಿಂಗ್’ ಸಿನಿಮಾದಲ್ಲಿ ರಕ್ತಸಿಕ್ತ ಅಧ್ಯಾಯ ಮಾತ್ರವಲ್ಲ, ಗಾಢ ಎಮೋಷನ್ ಕೂಡ ಇದೆ. ಯೋಗಿ ನಟನೆಗೆ ನಾನು ದೊಡ್ಡ ಅಭಿಮಾನಿ. ಅಪ್ಪು ಜೊತೆ ಹುಡುಗರು, ಯಾರೇ ಕೂಗಾಡಲಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ, ನನ್ನ ಜೊತೆ ಲೀಡರ್ ಸಿನಿಮಾದಲ್ಲೂ ಕೆಲಸ ಮಾಡಿದ್ದಾರೆ. ಈಗ ಹೊಸ ಸಿನಿಮಾ ಬೇಲ್ಲ್ಲೂ ಇದ್ದಾರೆ. ಯೋಗಿ ಒಳ್ಳೆಯ ನಟ, ಅವರಿಗೆ ಯಾವಾಗಲೂ ಒಳ್ಳೆಯದೇ ಆಗಲಿ” ಎಂದು ಶಿವರಾಜ್‌ಕುಮಾರ್ ಮನಸಾರೆ ಹಾರೈಸಿದರು.

50ನೇ ಸಿನಿಮಾದಲ್ಲಿ ಹೊಸ ಅಧ್ಯಾಯ

ಲೂಸ್‌ ಮಾದ ಯೋಗಿ’ ಹೇಳುವಂತೆ, “ಇದುವರೆಗೆ ಒಂದು ಲೆಕ್ಕ, ಇನ್ಮುಂದೆ ಮತ್ತೊಂದು ಲೆಕ್ಕ. ನನ್ನ ತಪ್ಪುಗಳಿಂದ ಪಾಠ ಕಲಿತಿದ್ದೇನೆ. ‘ಕಿಂಗ್’ ನನ್ನ ವೃತ್ತಿ ಜೀವನದ 50ನೇ ಸಿನಿಮಾ; ಇದರಲ್ಲಿ ನಾನು ಸಂಪೂರ್ಣ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಜಾಕ್ ನಿರ್ದೇಶನದ ಈ ದೊಡ್ಡ ಬಜೆಟ್ ಸಿನಿಮಾ ಎಲ್ಲರಿಗೂ ಇಷ್ಟವಾಗುವಂತಿರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಸಣ್ಣ ವಯಸ್ಸಿನಲ್ಲೇ ಹೀರೋ ಆಗಿ ಸೋಲು–ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಮತ್ತೆ ಪುಟಿದೇಳಲು ಸಿದ್ಧನಾಗಿದ್ದೇನೆ. ‘ಕಿಂಗ್’ ಅದಕ್ಕೆ ಪೂರಕ. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಮಾಡಲು ಯೋಚಿಸಿದ್ದೆವು; ಬಳಿಕ ತೆಲುಗು, ತಮಿಳು ಭಾಷೆಗಳಲ್ಲಿಯೂ ಮಾಡಲು ನಿರ್ಧರಿಸಿದ್ದೇವೆ” ಎಂದರು ಯೋಗಿ.

ಪ್ಯಾನ್‌–ಸೌತ್‌ ಪ್ಲ್ಯಾನ್

‘ಕಿಂಗ್’ ಸಿನಿಮಾದಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಮಂಗಳೂರು, ಮೈಸೂರು, ಚೆನ್ನೈ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿಯೂ ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಾಗಿದೆ.
ಸಂಗೀತ ನಿರ್ದೇಶನ ಶಶಾಂಕ್ ಶೇಷಗಿರಿ ಅವರದ್ದು; ಮಹೇಂದರ್, ಸಿದ್ದೇಶ್, ಸಂತೋಷ್ ಬಸವರಾಜ್, ವಿಶಾಲ್ ಪ್ರಸಾದ್, ಮಲ್ಲಿಕಾರ್ಜುನ ಸ್ವಾಮಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-13 14:33:41
No Reviews