ಎಚ್ಚರ ಭಾರತ! ಪಾಪಿ ಪಾಕ್ ಮತ್ತೆ ಡ್ರೋನ್ ಆಟ ಶುರು

ಜನವರಿ 9ರಿಂದ ಜಮ್ಮು–ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಡ್ರೋನ್‌ಗಳ ಅಕ್ರಮ ಹಾರಾಟ ಹೆಚ್ಚಾಗಿದೆ. ಪೂಂಚ್‌, ಸಾಂಬಾ, ನೌಶೆರಾ, ರಾಜೌರಿ ಸೇರಿದಂತೆ ಹಲವು ವಲಯಗಳಲ್ಲಿ ಡ್ರೋನ್‌ಗಳು ಕಂಡುಬಂದಿದ್ದು, ಭದ್ರತಾ ಪಡೆಗಳು ತಕ್ಷಣ ಪ್ರತಿಕ್ರಿಯಿಸಿವೆ.

ಈ ಡ್ರೋನ್‌ಗಳು ಆತ್ಮಹತ್ಯಾ ಡ್ರೋನ್‌ಗಳಲ್ಲ; ಹೆಚ್ಚಾಗಿ ಗುಪ್ತಚರ ನಿಗಾವಹಿಸುವ ಸಣ್ಣ ಗಾತ್ರದ ಡ್ರೋನ್‌ಗಳೆಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ. ಭಾರತದ ರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯಾ ಸಮಯ ಹಾಗೂ ಬಿರುಕುಗಳನ್ನು ಪರೀಕ್ಷಿಸುವ ಉದ್ದೇಶದಿಂದಲೇ ಪಾಕ್‌ ಈ ಚಟುವಟಿಕೆ ನಡೆಸುತ್ತಿದೆ ಎನ್ನಲಾಗಿದೆ.

ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಹಾಗೂ ಮಾದಕ ವಸ್ತು ಪೂರೈಕೆಗೆ ಯತ್ನ ನಡೆಯುತ್ತಿರುವ ಶಂಕೆಯೂ ವ್ಯಕ್ತವಾಗಿದೆ. ಗಣರಾಜ್ಯೋತ್ಸವದ ಮುನ್ನ ಗಡಿಯಲ್ಲಿ ಭದ್ರತೆ ಮತ್ತಷ್ಟು ಬಿಗಿಯಾಗಿದ್ದು, ಯಾವುದೇ ದುಸ್ಸಾಹಸಕ್ಕೆ ತಕ್ಕ ಉತ್ತರ ನೀಡಲು ಭಾರತ ಸಿದ್ಧವಾಗಿದೆ


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-16 17:20:43
No Reviews