ಪ್ಯಾಟ್ ಕಮಿನ್ಸ್‌ಗೆ ಬಂಪರ್ ಸಂಭಾವನೆ!

ವಿಶ್ವದ ವಿವಿಧ ಫ್ರಾಂಚೈಸಿ ಟಿ20 ಲೀಗ್‌ಗಳಲ್ಲಿ ಆಸ್ಟ್ರೇಲಿಯಾ ಆಟಗಾರರಿಗೆ ಭಾರೀ ಬೇಡಿಕೆ ಹೆಚ್ಚುತ್ತಿರುವ ನಡುವೆಯೇ, ರಾಷ್ಟ್ರೀಯ ತಂಡದ ಬಲ ಉಳಿಸಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ಹೆಜ್ಜೆ ಇಟ್ಟಿದೆ. ಸ್ಟಾರ್ ಆಟಗಾರರು ದೇಶದ ಪರ ಸದಾ ಲಭ್ಯರಾಗಿರಬೇಕು ಎಂಬ ಉದ್ದೇಶದಿಂದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್‌ಗೆ ಮುಂದಿನ ಮೂರು ವರ್ಷಗಳಿಗೆ ಬರೋಬ್ಬರಿ 113 ಕೋಟಿ ರೂಪಾಯಿಗಳ ಬಂಪರ್ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ.

ಕೇವಲ ಕಮಿನ್ಸ್ ಮಾತ್ರವಲ್ಲ, ಮೂರೂ ಸ್ವರೂಪಗಳಲ್ಲಿ ಮಿಂಚುತ್ತಿರುವ ಟ್ರಾವಿಸ್ ಹೆಡ್ ಹಾಗೂ ಜಾಶ್ ಹೇಝಲ್‌ವುಡ್‌ಗೂ ಕ್ರಿಕೆಟ್ ಆಸ್ಟ್ರೇಲಿಯಾ ಭಾರೀ ಮೊತ್ತದ ವಿಶೇಷ ಒಪ್ಪಂದ ನೀಡಲು ಮುಂದಾಗಿದೆ ಎನ್ನಲಾಗಿದೆ. ಫ್ರಾಂಚೈಸಿ ಕ್ರಿಕೆಟ್ ಆಕರ್ಷಣೆ ಹೆಚ್ಚುತ್ತಿರುವ ಈ ಸಮಯದಲ್ಲಿ, ರಾಷ್ಟ್ರೀಯ ತಂಡಕ್ಕೆ ಆದ್ಯತೆ ನೀಡುವಂತೆ ಆಟಗಾರರನ್ನು ಪ್ರೇರೇಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-07 18:47:27
No Reviews