ಪಾಂಡ್ಯ ಸಹೋದರರ ನಡುವೆ ಬಿರುಕು? ಕೃನಾಲ್ ಸ್ಪಷ್ಟನೆ ನೀಡಿದರು

ಹಾರ್ದಿಕ್-ಕೃನಾಲ್ ಸಂಬಂಧದಲ್ಲಿ ಅಂತರ ವದಂತಿ; ಕೃನಾಲ್ ಸ್ಪಷ್ಟನೆ ನೀಡಿದರೂ ಚರ್ಚೆ ಮುಂದುವರಿಕೆ

ಬೆಂಗಳೂರು: ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಡುತ್ತಿವೆ. ಐಪಿಎಲ್ 2026ರಲ್ಲಿ ನಡೆದ ಕೆಲ ಪಂದ್ಯಗಳ ವೇಳೆ ಇಬ್ಬರ ನಡುವೆ ಮೊದಲಿನಂತ ಆತ್ಮೀಯತೆ ಕಾಣಿಸದಿರುವುದು ಈ ಚರ್ಚೆಗೆ ಕಾರಣವಾಗಿದೆ.

ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಕೃನಾಲ್, ಎಲ್ಲವೂ ಸರಿಯಾಗಿದೆ ಎಂದು ನಗುತ್ತಲೇ ಸ್ಪಷ್ಟನೆ ನೀಡಿದರೂ, ಅಭಿಮಾನಿಗಳ ಕುತೂಹಲ ಕಡಿಮೆಯಾಗಿಲ್ಲ.

ಇನ್ನೊಂದೆಡೆ, ಹಾರ್ದಿಕ್ ಅವರ ವೈಯಕ್ತಿಕ ಜೀವನದಲ್ಲಿ ನಡೆದ ಬದಲಾವಣೆಗಳು, ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಚ್ಛೇದನ ಹಾಗೂ ಕೆಲವು ವೈಯಕ್ತಿಕ ಸಂಬಂಧಗಳ ಬಗ್ಗೆ ಹರಡಿರುವ ಊಹಾಪೋಹಗಳು ಸಹ ಈ ವದಂತಿಗಳಿಗೆ ಇಂಧನ ನೀಡಿವೆ ಎಂದು ಹೇಳಲಾಗುತ್ತಿದೆ.

ಅದೇ ವೇಳೆ, ನತಾಶಾ ಮತ್ತು ಪುತ್ರ ಅಗಸ್ತ್ಯ ಅವರೊಂದಿಗೆ ಕೃನಾಲ್ ಕುಟುಂಬದ ಆತ್ಮೀಯತೆ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಆದರೆ ಈ ಎಲ್ಲ ಊಹಾಪೋಹಗಳ ನಡುವೆ, ಇಬ್ಬರು ಸಹೋದರರು ಸಾರ್ವಜನಿಕವಾಗಿ “ಎಲ್ಲವೂ ಸರಿಯಾಗಿದೆ” ಎಂದು ಹೇಳಿರುವುದು ಗಮನಾರ್ಹವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-22 13:59:43
No Reviews