ತಾಂತ್ರಿಕ ದೋಷದಿಂದ ವಿಮಾನ ಗಗನದಲ್ಲಿ

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ Fly91 ಏರ್ ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿ, ವಿಮಾನವು ಏಕಾಏಕಿ ನಿಯಂತ್ರಣ ಕಳೆದುಕೊಂಡು ಸುಮಾರು 4 ಗಂಟೆಗಳ ಕಾಲ ಗಗನದಲ್ಲಿ ಸುತ್ತಾಡಿದ ಆತಂಕಕಾರಿ ಘಟನೆ ನಡೆದಿದೆ. ಹುಬ್ಬಳ್ಳಿ ಸಮೀಪ ತೊಂದರೆ ಎದುರಾದ ಹಿನ್ನೆಲೆಯಲ್ಲಿ ವಿಮಾನವನ್ನು ಮುಂಡಗೋಡ, ದಾವಣಗೆರೆ, ಶಿವಮೊಗ್ಗ ಮಾರ್ಗವಾಗಿ ತಿರುಗಿಸಿ ಕೊನೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ಈ ವೇಳೆ ಪ್ರಯಾಣಿಕರು ಭಯಭೀತರಾಗಿದ್ದು, ಕೆಲವರು ಕಣ್ಣೀರು ಹಾಕುತ್ತಾ ದೇವರಿಗೆ ಮೊರೆಹೋಗಿದ ದೃಶ್ಯಗಳು ಮನಕಲುಕುವಂತಾಗಿದ್ದವು. ಅದೃಷ್ಟವಶಾತ್ ಪೈಲಟ್‌ನ ಚಾಣಾಕ್ಷ ನಿರ್ಧಾರ ಮತ್ತು ಸಮಯೋಚಿತ ಕ್ರಮದಿಂದಾಗಿ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-20 11:55:08
No Reviews