ಜನ್ಮ ದಿನಾಂಕದಿಂದ ಭಾಗ್ಯ ಬದಲಾವಣೆ? ಮೊದಲ ಮಗುವಿನ ಅದೃಷ್ಟದಿಂದ ಕುಟುಂಬಕ್ಕೆ ಐಶ್ವರ್ಯ ಯೋಗ!

ವಿಶೇಷವಾಗಿ ಮನೆಯ ಮೊದಲ ಮಗು ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದರೆ, ಆ ಮಗುವಿನೊಂದಿಗೆ ಕುಟುಂಬದ ಅದೃಷ್ಟವೂ ಬದಲಾಗುತ್ತದೆ ಎನ್ನಲಾಗುತ್ತದೆ. ಇಂತಹ ಮಕ್ಕಳು ಕೇವಲ ಸ್ವತಃ ಶ್ರೀಮಂತರಾಗುವುದಷ್ಟೇ ಅಲ್ಲ, ಮನೆಗೆ ಐಶ್ವರ್ಯ ಮತ್ತು ಸುಖವನ್ನು ತರುತ್ತಾರೆ ಎಂಬ ನಂಬಿಕೆ ಇದೆ.

ಸಂಖ್ಯೆ 1 (1, 10, 19, 28)
ಯಾವುದೇ ತಿಂಗಳ 1, 10, 19 ಅಥವಾ 28ರಂದು ಜನಿಸಿದವರು ಸಂಖ್ಯೆ 1ರ ಗುಂಪಿಗೆ ಸೇರುತ್ತಾರೆ. ಇವರ ಮೇಲೆ ಸೂರ್ಯನ ಪ್ರಭಾವ ಹೆಚ್ಚಿರುತ್ತದೆ. ಈ ದಿನಾಂಕಗಳಲ್ಲಿ ಹುಟ್ಟಿದ ಮೊದಲ ಮಗು ಮನೆಗೆ ಕಾಲಿಟ್ಟ ತಕ್ಷಣವೇ ತಂದೆಗೆ ಅಥವಾ ಕುಟುಂಬಕ್ಕೆ ಹಠಾತ್ ಧನಲಾಭ ಉಂಟಾಗುವ ಸಾಧ್ಯತೆ ಇರುತ್ತದೆ. ಇವರು ಹುಟ್ಟಿನಿಂದಲೇ ನಾಯಕತ್ವ ಗುಣಗಳನ್ನು ಹೊಂದಿದ್ದು, ವ್ಯಾಪಾರ ಅಥವಾ ಸರ್ಕಾರಿ ವಲಯಗಳಲ್ಲಿ ಉನ್ನತ ಹುದ್ದೆಗೇರಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಯೋಗ ಹೊಂದಿರುತ್ತಾರೆ. ಸ್ವಂತ ಶ್ರಮದಿಂದ ರಾಜವೈಭೋಗವನ್ನು ಅನುಭವಿಸುತ್ತಾರೆ.

ಸಂಖ್ಯೆ 5 (5, 14, 23)
5, 14 ಅಥವಾ 23ರಂದು ಜನಿಸಿದವರು ಸಂಖ್ಯೆ 5ರ ಗುಂಪಿಗೆ ಸೇರುತ್ತಾರೆ. ಇವರ ಅಧಿಪತಿ ಬುಧ ಗ್ರಹವಾಗಿದ್ದು, ಬುದ್ಧಿವಂತಿಕೆ ಮತ್ತು ಚಾತುರ್ಯಕ್ಕೆ ಕಾರಣನಾಗಿರುತ್ತಾನೆ. ಈ ದಿನಾಂಕಗಳಲ್ಲಿ ಜನಿಸಿದ ಮೊದಲ ಮಗು ಮನೆಗೆ ಬಂದ ನಂತರ ಆರ್ಥಿಕ ಸಂಕಷ್ಟಗಳು ನಿಧಾನವಾಗಿ ದೂರವಾಗುತ್ತವೆ. ದೊಡ್ಡವರಾದ ಮೇಲೆ ಇವರು ಉನ್ನತ ಸ್ಥಾನಕ್ಕೇರಿ, ಷೇರು ಮಾರುಕಟ್ಟೆ, ತಂತ್ರಜ್ಞಾನ ಅಥವಾ ಸಂವಹನ ಕ್ಷೇತ್ರಗಳಲ್ಲಿ ಅಪಾರ ಸಂಪತ್ತು ಗಳಿಸುತ್ತಾರೆ. ಇವರ ಬುದ್ಧಿಶಕ್ತಿಯೇ ಇವರನ್ನು ಕುಬೇರರನ್ನಾಗಿ ಮಾಡುತ್ತದೆ.

ಸಂಖ್ಯೆ 6 (6, 15, 24)
ಯಾವುದೇ ತಿಂಗಳ 6, 15 ಅಥವಾ 24ರಂದು ಜನಿಸಿದವರು ಸಂಖ್ಯೆ 6ರ ಗುಂಪಿಗೆ ಸೇರುತ್ತಾರೆ. ಇವರ ಅಧಿಪತಿ ಶುಕ್ರನಾಗಿದ್ದು, ಐಶ್ವರ್ಯ ಮತ್ತು ಐಷಾರಾಮಕ್ಕೆ ಪ್ರತೀಕ. ಇವರು ಹುಟ್ಟಿದ ನಂತರ ಮನೆಗೆ ಕಾರು, ಮನೆ, ಆಭರಣಗಳಂತಹ ಐಷಾರಾಮಿ ವಸ್ತುಗಳನ್ನು ಖರೀದಿಸುವ ಯೋಗ ಬರುತ್ತದೆ. ಲಕ್ಷ್ಮಿ ಕಟಾಕ್ಷ ಸದಾ ಇರುತ್ತದೆ. ಕಲೆ, ಮಾಧ್ಯಮ ಮತ್ತು ಐಷಾರಾಮಿ ವ್ಯವಹಾರಗಳಲ್ಲಿ ಇವರು ಯಶಸ್ಸು ಸಾಧಿಸಿ ರಾಜರಂತೆ ಬದುಕುತ್ತಾರೆ.

ಇನ್ನೂ 9, 18, 27ರಂದು ಜನಿಸಿದವರು ಸಂಖ್ಯೆ 9ರ ಗುಂಪಿಗೆ ಸೇರುತ್ತಾರೆ. ಇವರು ಮನೆಯ ಮೊದಲ ಮಗುವಾಗಿದ್ದರೆ, ಕುಟುಂಬಕ್ಕೆ ಅಪಾರ ಅದೃಷ್ಟವನ್ನು ಹೊತ್ತು ತರುತ್ತಾರೆ. ಭೂಮಿ, ಆಸ್ತಿ ಸೇರ್ಪಡೆಗೊಳ್ಳುವ ಸಾಧ್ಯತೆ ಹೆಚ್ಚು. ಇವರು ಹಠ ಮತ್ತು ಪರಿಶ್ರಮದಿಂದ ಕೆಲಸ ಮಾಡುವ ಗುಣ ಹೊಂದಿದ್ದು, ರಿಯಲ್ ಎಸ್ಟೇಟ್ ಅಥವಾ ರಕ್ಷಣಾ ವಲಯಗಳಲ್ಲಿ ಭಾರಿ ಹಣ ಸಂಪಾದಿಸುತ್ತಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-06 16:23:25
No Reviews