ಬೆಂಗಳೂರಿನಲ್ಲಿ ಫೆ.9ರಂದು ಪವರ್‌ ಕಟ್ ಫೆ.9 ಬೆಂಗಳೂರಿನ ಈ ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ ನಾಳೆ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ಬಂದ್

ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಫೆಬ್ರವರಿ 9ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಸಾರಕ್ಕಿ ಮತ್ತು ಎಲಿಟ್ ಪ್ರೋಮೆನೇಡ್ ಉಪಕೇಂದ್ರ ವ್ಯಾಪ್ತಿಯ ಶಾಕಂಬರಿ ನಗರ, ಜೆ.ಪಿ.ನಗರ, ಜಯನಗರ, ಪುಟ್ಟೇನಹಳ್ಳಿ, ಬನ್ನೇರಘಟ್ಟ ರಸ್ತೆ, ಡಾಲರ್ಸ್ ಲೇಔಟ್ ಸೇರಿದಂತೆ ಅನೇಕ ಅಪಾರ್ಟ್‌ಮೆಂಟ್‌ಗಳು ಹಾಗೂ ಲೇಔಟ್‌ಗಳಲ್ಲಿ ಕರೆಂಟ್ ಇರುವುದಿಲ್ಲ.

ಅದೇ ರೀತಿ 66/11 ಕೆವಿ ಗುರುವಿನಪುರ, ಬಿವಿ ಹಳ್ಳಿ ಉಪಕೇಂದ್ರಗಳು ಹಾಗೂ ಟಿ.ಕೆ.ಹಳ್ಳಿ–ಹಾರೋಹಳ್ಳಿ ಲೈನ್‌ನಲ್ಲಿ ನಡೆಯುವ ಕಾಮಗಾರಿಯಿಂದ ಚನ್ನಪಟ್ಟಣ, ಕನಕಪುರ ತಾಲ್ಲೂಕಿನ ಹಲವು ಗ್ರಾಮಗಳು, ಬ್ರಿಗೇಡ್ ಮೆಡೋಸ್ ಉಪಕೇಂದ್ರ ವ್ಯಾಪ್ತಿಯ ಬಂಜಾರಪಾಳ್ಯ, ಅಗರ, ತಟಗುಣಿ, ಕಾವೇರಿ ನಗರ, ರಾಮಚಂದ್ರಪ್ಪ ಲೇಔಟ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಟ್ಯಾನರಿ ರಸ್ತೆ, ಲಿಂಗರಾಜಪುರ, ಬಾಗಲೂರು ಲೇಔಟ್, ಐಟಿಸಿ ಮುಖ್ಯ ರಸ್ತೆ, ಜೀವನಹಳ್ಳಿ ಸೇರಿದಂತೆ ಪೂರ್ವ ಮತ್ತು ಉತ್ತರ ಬೆಂಗಳೂರಿನ ಹಲವೆಡೆ ಸಹ ಕರೆಂಟ್ ಇರುವುದಿಲ್ಲ.

ವಿದ್ಯುತ್ ಸಮಸ್ಯೆಗಳ ಕುರಿತು ಗ್ರಾಹಕರು 1912 ಸಹಾಯವಾಣಿ ಅಥವಾ ಬೆಸ್ಕಾಂ ವಾಟ್ಸ್‌ಆ್ಯಪ್ ಸಂಖ್ಯೆಗೆ ದೂರು ದಾಖಲಿಸಬಹುದು ಎಂದು ಬೆಸ್ಕಾಂ ಮನವಿ ಮಾಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-07 18:11:12
No Reviews