ನಾಳೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಪವರ್‌ ಕಟ್

ಬೆಂಗಳೂರು ಪವರ್ ಕಟ್: ಫೆ.6–7ರಂದು ಹಲವೆಡೆ ವಿದ್ಯುತ್ ವ್ಯತ್ಯಯ

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ನಗರದ ವಿವಿಧ ಭಾಗಗಳಲ್ಲಿ ಫೆಬ್ರವರಿ 6 ಮತ್ತು 7ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಣೆ ತಿಳಿಸಿದೆ.

ಮಲ್ಲೇಶ್ವರಂ ವಿಭಾಗ – ಸಿ–6 ಉಪವಿಭಾಗ

ಆರ್.ಎಂ.ವಿ. ಸಬ್‌ಸ್ಟೇಷನ್‌ನಲ್ಲಿ ನಡೆಯುವ ತುರ್ತು ಕಾಮಗಾರಿಯಿಂದ ಫೆ.7ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು: ರಾಮಯ್ಯ ಆಸ್ಪತ್ರೆ, ಪೈಪ್‌ಲೈನ್ ರಸ್ತೆ, ಎಂಎಸ್‌ಆರ್ ನಗರ, ಬಿಇಎಲ್ ರಸ್ತೆ, ಸಿಪಿಆರ್‌ಐ ಕ್ವಾರ್ಟರ್ಸ್, ಸದಾಶಿವನಗರ ಪೊಲೀಸ್ ಠಾಣೆ, ಎಜಿಎಸ್ ಲೇಔಟ್, ಜಲದರ್ಶಿನಿ ಲೇಔಟ್, ರಾಮಯ್ಯ ಬಾಲಕರ ಹಾಸ್ಟೆಲ್, ಎ.ಕೆ. ಕಾಲೋನಿ, ಶ್ರೀನಿಕೇತ್ ಅಪಾರ್ಟ್‌ಮೆಂಟ್, ಕಾಫಿ ಡೇ, ಪಿಜ್ಜಾ ಹಟ್ (ರಾಮಯ್ಯ ಆಸ್ಪತ್ರೆ ಎದುರು), ನಾರಾಯಣ ಪ್ರಸಾದ್ ಕಟ್ಟಡ, ಸೀನಪ್ಪ ಲೇಔಟ್, ಇಸ್ರೋ, ಡಾಲರ್ಸ್ ಕಾಲೋನಿ, ಚಿಕ್ಕಮಾರನಹಳ್ಳಿ, ಗೌರಿ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಹೆಬ್ಬಾಳ ವಿಭಾಗ – ಸಿ–4 ಉಪವಿಭಾಗ

220/66/11 ಕೆವಿ ಹೆಬ್ಬಾಳ ಸಬ್‌ಸ್ಟೇಷನ್‌ನಲ್ಲಿ ನಡೆಯುವ ತುರ್ತು ನಿರ್ವಹಣಾ ಕಾಮಗಾರಿಯಿಂದ ಫೆ.7ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಲ್ಲಿ ಗಂಗಾನಗರ, ಲಕ್ಷ್ಮಯ್ಯ ಬ್ಲಾಕ್, ವೀವರ್ ಕಾಲೋನಿ, ಸಿಬಿಐ ಹಾಗೂ ಆರ್‌ಬಿಐ ಕ್ವಾರ್ಟರ್ಸ್, ಯುಎಎಸ್ ಕ್ಯಾಂಪಸ್, ದಿನ್ನೂರ್ ಮುಖ್ಯ ರಸ್ತೆ, ಆರ್‌ಟಿ ನಗರ, ಮುನನಪ್ಪ ಕಾಲೋನಿ, ಎಚ್‌ಎಂಟಿ ಬ್ಲಾಕ್, ಚಾಮುಂಡಿ ನಗರ, ಮಾಜಿ ಸೈನಿಕರ ಕಾಲೋನಿ, ಅಶ್ವತ್ ನಗರ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್, ನೃಪತುಂಗ ಬಡಾವಣೆ, ಶಾಂತಿಸಾಗರ ಮುಖ್ಯ ರಸ್ತೆ, ಜಡ್ಜಸ್ ಕಾಲೋನಿ, ಕುವೆಂಪು ಲೇಔಟ್, ನೇತಾಜಿ ನಗರ, ವಿನಾಯಕ ಲೇಔಟ್, ಗಂಗಾನಗರ ಮಾರುಕಟ್ಟೆ ಸೇರಿದಂತೆ ಹಲವಾರು ಲೇಔಟ್‌ಗಳು ಸೇರಿವೆ.

ಇದಲ್ಲದೆ ಚೋಳನಾಯಕನಹಳ್ಳಿ, ಸಂಜಯನಗರ, ಎಇಸಿಎಸ್ ಲೇಔಟ್, ಭೂಪಸಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, ಕಲ್ಪನಾ ಚಾವ್ಲಾ ರಸ್ತೆ, ದಿನ್ನೂರ್ ರಸ್ತೆಯ ಭಾಗಗಳು, ನೆಬ್ಬಾಳ, ಗುಡ್ಡದಹಳ್ಳಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-05 18:56:37
No Reviews