ಡೆಲ್ಲಿ ವಿರುದ್ಧ ಸಂಜು ಸ್ಯಾಮ್ಸನ್ ದಾಖಲೆ ಏನು?

ಸಂಜು ಸ್ಯಾಮ್ಸನ್ Sanju Samson ಡೆಲ್ಲಿ ಕ್ಯಾಪಿಟಲ್ಸ್ DC ವಿರುದ್ಧ 87 ರನ್‌ಗಳ ಅದ್ಭುತ ಅಜೇಯ ಇನಿಂಗ್ಸ್ ಆಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ CSK ಗೆಲುವಿಗೆ ಪ್ರಮುಖ ಕಾರಣರಾದರು. ಅವರ ಜೊತೆಗೆ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 13 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟಾದರು, ಆದರೆ ಸಂಜು ಒಬ್ಬರೇ ಪಂದ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಿದರು.

ಸ್ಪಿನ್ ಸಹಾಯ ನೀಡಿದ ಪಿಚ್‌ನಲ್ಲಿ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರಂತಹ ಬೌಲರ್‌ಗಳ ವಿರುದ್ಧವೂ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿದ ಸಂಜು, 52 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಋತುವಿನ ಆರಂಭದಲ್ಲೇ ಅವರು ಚೆಪಾಕ್‌ನಲ್ಲಿ ಡೆಲ್ಲಿ ವಿರುದ್ಧ 115 ರನ್‌ಗಳ ಶತಕವನ್ನೂ ಬಾರಿಸಿದ್ದರು. ಹೀಗಾಗಿ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಡೆಲ್ಲಿ ವಿರುದ್ಧ ಒಟ್ಟು 202 ರನ್‌ಗಳನ್ನು ಸಂಗ್ರಹಿಸಿದ್ದಾರೆ.

ಇದರಿಂದ ಸಂಜು ಸ್ಯಾಮ್ಸನ್, ಐಪಿಎಲ್ ಇತಿಹಾಸದಲ್ಲಿ ಲೀಗ್ ಹಂತದಲ್ಲಿ ಒಂದೇ ತಂಡದ ವಿರುದ್ಧ 200ಕ್ಕೂ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಗೌರವ ಪಡೆದಿದ್ದಾರೆ. ಈ ದಾಖಲೆಯಲ್ಲಿ ವಿರಾಟ್ ಕೊಹ್ಲಿ 209 vs GL ಮತ್ತು ಕೆಎಲ್ ರಾಹುಲ್ 206 vs MI ಅವರ ಹೆಸರುಗಳಿವೆ.

2026ರ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರ್ಪಡೆಯಾದ ನಂತರ ಸಂಜು ಈಗಾಗಲೇ 10 ಪಂದ್ಯಗಳಲ್ಲಿ 402 ರನ್‌ಗಳನ್ನು ಗಳಿಸಿ, ಎರಡು ಶತಕಗಳೊಂದಿಗೆ ತಂಡದ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-06 13:12:44
No Reviews