"ಹಾರ್ಮುಜ್ ಜಲಸಂಧಿ ತೈಲ ಹರಿವು ಸ್ಥಗಿತ: ಜಾಗತಿಕ ಇಂಧನ ಮಾರುಕಟ್ಟೆ ಆತಂಕದಲ್ಲಿ"

ಹಾರ್ಮುಜ್ ಜಲಸಂಧಿ ತೈಲ ಸಂಕುಚನೆ: ಜಾಗತಿಕ ಮಾರುಕಟ್ಟೆ ಆತಂಕದಲ್ಲಿ

ಟೆಹ್ರಾನ್, ಮಾರ್ಚ್ 3: ಹಾರ್ಮುಜ್ (Hormuz) ಜಲಸಂಧಿಯ ಮೂಲಕ ಜಾಗತಿಕ ತೈಲ ಹರಿವು ಬಹುತೇಕ ಸ್ಥಗಿತಗೊಂಡಿದ್ದು, ಪೂರ್ವ–ಪಶ್ಚಿಮ ಕಚ್ಚಾ ತೈಲ ಸಾಗಣೆಯ (Middle East oil crisis) ಸುಮಾರು 86% ಕಡಿತವಾಗಿದೆ. ಇದರಿಂದ ಜಾಗತಿಕ ಇಂಧನ ಮಾರುಕಟ್ಟೆಗಳು ಸಂಕಷ್ಟದ ಅಂಚಿನತ್ತ ತಳ್ಳಲ್ಪಟ್ಟಿವೆ.

ಮರಿಟೈಮ್ ಅನಾಲಿಟಿಕ್ಸ್ ಸಂಸ್ಥೆಗಳಾದ ವಿಂಡ್‌ವರ್ಡ್ ಮತ್ತು ಕೆಪ್ಲರ್ ನೀಡಿದ ಮಾಹಿತಿ ಪ್ರಕಾರ, ಜಲಮಾರ್ಗವನ್ನು ಅಧಿಕೃತವಾಗಿ ಮುಚ್ಚಲಾಗಿಲ್ಲದಿದ್ದರೂ, ಪ್ರಾಯೋಗಿಕವಾಗಿ ಅದು ಮುಚ್ಚಿರುವಂತಿದೆ. ಮಾರ್ಚ್ 1ರಂದು ಕೇವಲ 2.8 ಮಿಲಿಯನ್ ಬ್ಯಾರೆಲ್‌ಗಳಷ್ಟು ಮಾತ್ರ ಹಾರ್ಮುಜ್ ಅನ್ನು ದಾಟಿದೆ, ಇದು 2026 ರ ದೈನಂದಿನ ಸರಾಸರಿ 19.8 ಮಿಲಿಯನ್ ಬ್ಯಾರೆಲ್‌ನಿಂದ ಸುಮಾರು ಶೇ. 86 ರಷ್ಟು ಕುಸಿತ. ಮಾರ್ಚ್ 2 ರ ಮುಂಜಾನೆ, ಪ್ರಮುಖ ಲೇನ್‍ಗಳಲ್ಲಿ ಕೇವಲ ಒಂದು ಸಣ್ಣ ಟ್ಯಾಂಕರ್ ಮತ್ತು ಕಾರ್ಗೋ ಹಡಗು ಸಂಚರಿಸಿದೆ.



ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-03 19:05:44
No Reviews