200 ರೂ ಪಾವತಿಗೆ ಯುವತಿಯ ನಿರಾಕರಣೆ – ಕಾರಣ ಏನು?

ಇತ್ತೀಚಿನ ದಿನಗಳಲ್ಲಿ ಕ್ಯಾಬ್ ಚಾಲಕರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ಹೆಚ್ಚಾಗುತ್ತಿದ್ದು, ದುಪ್ಪಟ್ಟು ದರ, ಗಮ್ಯಸ್ಥಾನ ಸಮಸ್ಯೆ ಸೇರಿದಂತೆ ಹಲವು ಕಾರಣಗಳು ಬೆಳಕಿಗೆ ಬರುತ್ತಿವೆ.

ಇದೇ ರೀತಿಯ ಘಟನೆಯೊಂದು ದೆಹಲಿಯಲ್ಲಿ ನಡೆದಿದ್ದು, ಮಹಿಳಾ ಪ್ರಯಾಣಿಕ ಮತ್ತು ಕ್ಯಾಬ್ ಚಾಲಕನ ನಡುವಿನ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 200 ರೂಪಾಯಿ ಬಾಡಿಗೆ ವಿವಾದವೇ ಈ ಗಲಾಟೆಗೆ ಕಾರಣವಾಗಿದೆ.

ತಾನು ಪತ್ರಕರ್ತೆ ಎಂದು ಹೇಳಿಕೊಂಡ ಮಹಿಳೆ ದರ ಪಾವತಿಸಲು ನಿರಾಕರಿಸಿದ್ದರಿಂದ ವಾಗ್ವಾದ ತೀವ್ರಗೊಂಡಿದ್ದು, ಚಾಲಕ ತನ್ನ ಮೊಬೈಲ್‌ನಲ್ಲಿ ಘಟನೆಯನ್ನು ದಾಖಲಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-23 17:06:54
No Reviews