‘ಗಿಲ್ಲಿ ಅಣ್ಣನೇ ವಿನ್ನರ್’ – ಬಿಗ್ ಬಾಸ್ 11 ವಿಜೇತ ಹನುಮಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಸವಣೂರಿನಲ್ಲಿ ಮಾತನಾಡಿದ ಅವರು, “ವಿನ್ನರ್ ಘೋಷಿಸುವ ಕ್ಷಣದಲ್ಲಿ ಎದೆಯಲ್ಲಿ ಢವಢವ ಅನಿಸುತ್ತದೆ. ಈ ಬಾರಿ ಗಿಲ್ಲಿ ತುಂಬಾ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ಸಂಪೂರ್ಣ ವಿಶ್ವಾಸ ನನಗೆ ಇದೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದಭಾವ ಇಲ್ಲ. ಈ ಸೀಸನ್‌ನಲ್ಲಿ ಅತಿ ಹೆಚ್ಚು ವೋಟಿಂಗ್ ಆಗಿದ್ದು, ಗಿಲ್ಲಿಗೆ ಹೆಚ್ಚಿನ ವೋಟುಗಳು ಬಂದಿವೆ. ನಾನು ಸಹ ಗಿಲ್ಲಿಗೆ ವೋಟ್ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.

ಇನ್ನೂ, “ನಾನು ಮತ್ತು ಗಿಲ್ಲಿ ಅಣ್ಣ ಒಟ್ಟಿಗೆ ಭರ್ಜರಿ ಬ್ಯಾಚುಲರ್ ಹಾಗೂ ಕಾಮಿಡಿ ಕಿಲಾಡಿ ಶೋ ಮಾಡಿದ್ದೇವೆ. ಗಿಲ್ಲಿ ಅಣ್ಣನೇ ಗೆಲ್ತಾನೆ. ನನ್ನ ಫೇವರಿಟ್ ಕೂಡ ಅವನೇ. ಸೋತವರು ಬೇಜಾರು ಮಾಡಿಕೊಳ್ಳಬಾರದು. ಎಲ್ಲರಿಗೂ ಆಲ್ ದಿ ಬೆಸ್ಟ್, ವಿಶೇಷವಾಗಿ ಗಿಲ್ಲಿ ಅಣ್ಣನಿಗೆ” ಎಂದು ಹನುಮಂತ ಹೇಳಿದರು.

ಅದೇ ವೇಳೆ, “ಸುದೀಪ್ ಸರ್ ಮುಂದೆ ನಿಲ್ಲುವುದು ಕೂಡ ಒಂದು ಪುಣ್ಯ. ಫೈನಲ್ ವರೆಗೂ ಹೋಗುವುದೇ ದೊಡ್ಡ ಸಾಧನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಗ್ ಬಾಸ್ ಸೀಸನ್ 12ರ ವಿನ್ನರ್ ಘೋಷಣೆಗೆ ಈಗ ಕೆಲವೇ ಗಂಟೆಗಳು ಬಾಕಿ ಇದ್ದು, ಎಲ್ಲೆಡೆ ಫ್ಯಾನ್ಸ್ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಗಿಲ್ಲಿ, ರಕ್ಷಿತಾ, ಅಶ್ವಿನಿ, ರಘು, ಧನುಷ್ ಮತ್ತು ಕಾವ್ಯ ಫೈನಲ್‌ಗೆ ಪ್ರವೇಶಿಸಿದ್ದು, ಈ ಬಾರಿ ಕಪ್ ಯಾರ ಪಾಲಾಗಲಿದೆ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-18 17:36:25
No Reviews