ಗಿಲ್ಲಿ ಪ್ರವೇಶಕ್ಕೆ ನೆಕ್ಸ್ಟ್‌ ಲೆವೆಲ್‌’ ಕ್ರೇಜ್‌ ಬಹುತೇಕ ಅಭಿಮಾನಿಗಳು ಗಿಲ್ಲಿ ಫ್ಯಾನ್ಸ್‌

ಬಿಗ್‌ ಬಾಸ್‌ 12 ಫ್ಯಾನ್ಸ್‌ ಮೀಟ್‌ನಲ್ಲಿ ಗಿಲ್ಲಿ ನಟನಿಗೆ ಭಾರೀ ಭದ್ರತೆ; 6 ಬಾಡಿಗಾರ್ಡ್ಸ್‌ ನೇಮಕ

ಬಿಗ್ ಬಾಸ್ ಕನ್ನಡ 12ರ ಫಿನಾಲೆ ವಾರದಲ್ಲಿ ನಡೆದ ಫ್ಯಾನ್ಸ್‌ ಮೀಟ್‌ನಲ್ಲಿ ಗಿಲ್ಲಿ ನಟನ ಜನಪ್ರಿಯತೆ ಸ್ಪಷ್ಟವಾಗಿ ಗೋಚರಿಸಿದೆ. ಇತರೆ ಸ್ಪರ್ಧಿಗಳಿಗೆ ಇಬ್ಬರು ಬಾಡಿಗಾರ್ಡ್ಸ್‌ ಇದ್ದರೆ, ಗಿಲ್ಲಿ ನಟ ಬಂದಾಗ ಭದ್ರತೆಗಾಗಿ ಆರು ಮಂದಿ ಬೌನ್ಸರ್‌ಗಳನ್ನು ನಿಯೋಜಿಸಲಾಗಿತ್ತು.

 

 

ಗಿಲ್ಲಿ ಪ್ರವೇಶಕ್ಕೆ ನೆಕ್ಸ್ಟ್‌ ಲೆವೆಲ್‌ಕ್ರೇಜ್‌; ಬಹುತೇಕ ಅಭಿಮಾನಿಗಳು ಗಿಲ್ಲಿ ಫ್ಯಾನ್ಸ್‌

ಬಿಗ್‌ ಬಾಸ್‌ ಮನೆಯೊಳಗೆ ಅಭಿಮಾನಿಗಳು ಭೇಟಿ ನೀಡಿದ ವೇಳೆ, ಗಿಲ್ಲಿ ನಟ ಬಂದಾಗ ಫ್ಯಾನ್ಸ್‌ ಕ್ರೇಜ್‌ ಹೆಚ್ಚಾಯಿತು. ಗಿಲ್ಲಿ ನಟ ಎಲ್ಲರಿಗೂ ಶೇಕ್‌ಹ್ಯಾಂಡ್‌ ಮಾಡಿ, ಡ್ಯಾನ್ಸ್‌ ಮೂಲಕ ಅಭಿಮಾನಿಗಳನ್ನು ಮೆಚ್ಚಿಸಿದರು. ಫ್ಯಾನ್ಸ್‌ ಮೀಟ್‌ನಲ್ಲಿ ಭಾಗವಹಿಸಿದ್ದ ಬಹುತೇಕರು ಗಿಲ್ಲಿ ನಟನ ಅಭಿಮಾನಿಗಳೇ ಆಗಿದ್ದರು.

 

ಗಿಲ್ಲಿ ಗೆಲುವಿನ ಸಾಧ್ಯತೆ ಹೆಚ್ಚೇ? ಜಗ್ಗೇಶ್‌ ಭವಿಷ್ಯವಾಣಿ ಈಗ ನಿಜವಾಗುತ್ತಿದೆ

ಫ್ಯಾನ್ಸ್‌ ಮೀಟ್‌ನಲ್ಲಿ ಭಾಗವಹಿಸಿದ್ದ ಅಭಿಮಾನಿಯೊಬ್ಬರು, “ಗಿಲ್ಲಿ ಬರುವ ಮೊದಲು 45 ನಿಮಿಷ ನಮ್ಮ ವರ್ತನೆ ಬಗ್ಗೆ ಸೂಚನೆ ನೀಡಿದ್ದರು. ಇದರಿಂದಲೇ ಗಿಲ್ಲಿ ಕ್ರೇಜ್‌ ಬಿಗ್‌ ಬಾಸ್‌ಗೂ ಗೊತ್ತಿದೆ” ಎಂದು ತಿಳಿಸಿದ್ದಾರೆ. ವರ್ಷಗಳ ಹಿಂದೆ ನಟ ಜಗ್ಗೇಶ್‌ ಹೇಳಿದ್ದ ಭವಿಷ್ಯವಾಣಿ ಈಗ ನಿಜವಾಗುವ ಹಂತಕ್ಕೆ ಬಂದಿದೆ. ಈ ಬಾರಿ ಬಿಗ್‌ ಬಾಸ್‌ 12ರ ವಿನ್ನರ್‌ ಆಗುವ ಸಾಧ್ಯತೆ ಗಿಲ್ಲಿ ನಟನ ಕಡೆ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.

 

 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-16 10:29:06
No Reviews