‘ರಕ್ಷಿತಾ ಶೆಟ್ಟಿ ವಿನ್ನರ್’ ಎಂದ ವಿಕಿಪೀಡಿಯಾ! ಬಿಗ್ ಬಾಸ್ ಫಿನಾಲೆಗೂ ಮುನ್ನ ವೀಕ್ಷಕರಿಗೆ ಶಾಕ್

ಇಂತಹ ಸಂದರ್ಭದಲ್ಲಿ ವಿಕಿಪೀಡಿಯಾದಲ್ಲಿ ವಿನ್ನರ್ ಘೋಷಣೆ ಆಗಿರುವುದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಯಲ್ಲಿ ರಘು, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಶ್ ಮತ್ತು ಕಾವ್ಯ ಸ್ಪರ್ಧಿಸುತ್ತಿದ್ದಾರೆ. ಇವರ ಪೈಕಿ ಒಬ್ಬರು ಇಂದು ಟ್ರೋಫಿ ಎತ್ತಲಿದ್ದಾರೆ.

ಈ ಸೀಸನ್‌ನಲ್ಲಿ ರಕ್ಷಿತಾ ಶೆಟ್ಟಿ ಭಾರೀ ಪೈಪೋಟಿ ನೀಡುತ್ತಿದ್ದು, ಮೊದಲ ವಾರವೇ ಮನೆಯಿಂದ ಹೊರಹೋಗಿ, ನಂತರ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಪ್ರವೇಶಿಸಿದ್ದರು. ಅದಾದ ಬಳಿಕ ಅವರ ಆಟ ಮತ್ತಷ್ಟು ಬಲಿಷ್ಠವಾಗಿದೆ.

ಇದೀಗ ವಿಕಿಪೀಡಿಯಾದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ – ರಕ್ಷಿತಾ ಶೆಟ್ಟಿ’ ಎಂದು ಉಲ್ಲೇಖಗೊಂಡಿರುವ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಕೆಲವೇ ಸಮಯದಲ್ಲಿ ಈ ಮಾಹಿತಿ ಬದಲಾಯಿಸಲಾಗಿದ್ದು, ಇದು ತಾತ್ಕಾಲಿಕ ಎಡಿಟ್ ಎನ್ನಲಾಗಿದೆ.

ವಿಕಿಪೀಡಿಯಾವನ್ನು ಯಾರಾದರೂ ಸಂಪಾದಿಸಬಹುದಾದ ಕಾರಣ, ರಕ್ಷಿತಾ ಅಭಿಮಾನಿಗಳೇ ಈ ರೀತಿಯ ಎಡಿಟ್ ಮಾಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದಾಗ್ಯೂ, ಅಧಿಕೃತವಾಗಿ ವಿನ್ನರ್ ಘೋಷಣೆಯನ್ನು ರಾತ್ರಿ ಕಿಚ್ಚ ಸುದೀಪ್ ಮಾಡಲಿದ್ದಾರೆ.

ಫ್ಯಾನ್ಸ್‌ಗಳ ಅಂದಾಜು ಪ್ರಕಾರ ರಕ್ಷಿತಾ ಶೆಟ್ಟಿಗೆ ರನ್ನರ್-ಅಪ್ ಸ್ಥಾನ ಸಿಗುವ ಸಾಧ್ಯತೆ ಇದ್ದು, ಅಶ್ವಿನಿ ಗೌಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಂತಿಮವಾಗಿ ಕಪ್ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-18 19:16:59
No Reviews