ನಾಳೆ ಬ್ಯಾಂಕ್ ಮುಷ್ಕರ: ಬ್ಯಾಂಕ್ ತೆರೆದುಕೊಳ್ಳುತ್ತಾ?

ಮುಷ್ಕರಕ್ಕೆ ಕರೆ ನೀಡಿದ ಸಂಘಟನೆಗಳು ಯಾವುವು
ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ AIBEA ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ AIBOA ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ BEFIಸೇರಿದಂತೆ ಪ್ರಮುಖ ಬ್ಯಾಂಕ್ ಸಂಘಟನೆಗಳು, 10 ಕೇಂದ್ರ ಕಾರ್ಮಿಕ ಸಂಘಟನೆಗಳೊಂದಿಗೆ ಸೇರಿ ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಮುಷ್ಕರದ ಪ್ರಮುಖ ಕಾರಣಗಳು
 ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿವೆ ಎನ್ನಲಾಗಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿರುವುದು
 ಕಾರ್ಮಿಕ ವರ್ಗದ ಮೇಲೆ ಹೆಚ್ಚುತ್ತಿರುವ ಒತ್ತಡ ಮತ್ತು ದಾಳಿಗಳು
 ಕಾರ್ಮಿಕ ಸಂಘಟನೆಗಳ ನೋಂದಣಿಗೆ ವಿಧಿಸಿರುವ ಕಠಿಣ ನಿಯಮಗಳು
 ಬ್ಯಾಂಕ್ ನೌಕರರ ಕೆಲಸ–ವೈಯಕ್ತಿಕ ಜೀವನ ಸಮತೋಲನಕ್ಕಾಗಿ ವಾರಕ್ಕೆ ಐದು ದಿನಗಳ ಕೆಲಸದ ಅವಧಿಗೆ ಆಗ್ರಹ

ಬ್ಯಾಂಕ್ ಸಂಘಟನೆಗಳ ಪ್ರಕಾರ, ಜಾರಿಗೆ ತರಲು ಉದ್ದೇಶಿಸಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿಯಾಗಿದ್ದು, ಟ್ರೇಡ್ ಯೂನಿಯನ್‌ಗಳ ಮೇಲೆ ಅನಗತ್ಯ ನಿರ್ಬಂಧಗಳನ್ನು ವಿಧಿಸುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಫೆಬ್ರವರಿ 12ರಂದು ಬ್ಯಾಂಕ್‌ಗಳು ತೆರೆದಿರುತ್ತವೆಯೇ
ಭಾರತೀಯ ರಿಸರ್ವ್ ಬ್ಯಾಂಕ್ RBI ಅಥವಾ ಇತರ ಪ್ರಮುಖ ಬ್ಯಾಂಕ್‌ಗಳು ಫೆಬ್ರವರಿ 12ಕ್ಕೆ ಯಾವುದೇ ಅಧಿಕೃತ ರಜೆ ಘೋಷಿಸಿಲ್ಲ. ಹೀಗಾಗಿ ತಾಂತ್ರಿಕವಾಗಿ ಬ್ಯಾಂಕ್‌ಗಳು ತೆರೆದಿರಲಿವೆ. ಆದರೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಬಿಎಸ್‌ಇಗೆ ಬ್ಯಾಂಕ್ ಆಫ್ ಬರೋಡಾ ನೀಡಿದ ಎಚ್ಚರಿಕೆ ಏನು?
ಬ್ಯಾಂಕ್ ಆಫ್ ಬರೋಡಾ ಬಾಂಬೆ ಸ್ಟಾಕ್ ಎಕ್ಸ್ಚೇಂಜ್‌ಗೆ ಪತ್ರ ಬರೆದು, ಮುಷ್ಕರದ ದಿನ ಶಾಖೆಗಳು ಮತ್ತು ಕಚೇರಿಗಳು ಸುಗಮವಾಗಿ ಕಾರ್ಯನಿರ್ವಹಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಮುಷ್ಕರ ನಡೆದಲ್ಲಿ ಬ್ಯಾಂಕಿನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಸಂಭವಿಸುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಫೆಬ್ರವರಿ 12ರಂದು ಹಣಕಾಸಿನ ವ್ಯವಹಾರಗಳನ್ನು ಯೋಜಿಸುವ ಗ್ರಾಹಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-11 13:18:20
No Reviews