ಏಪ್ರಿಲ್ 5ರಂದು ನಮ್ಮ ಮೆಟ್ರೋ ನೇರಳೆ ಮಾರ್ಗ 2 ಗಂಟೆ ಸ್ಥಗಿತ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಏಪ್ರಿಲ್ 5ರಂದು ನಮ್ಮ ಮೆಟ್ರೋ ನೇರಳೆ ಮಾರ್ಗ ನಲ್ಲಿ ತಾತ್ಕಾಲಿಕ ಬದಲಾವಣೆ ಪ್ರಕಟಿಸಿದೆ. ಬೆಳಿಗ್ಗೆ 7:00ರಿಂದ 9:00ರವರೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣ ನಡುವೆ ಮೆಟ್ರೋ ಸೇವೆ ಸ್ಥಗಿತವಾಗಲಿದೆ. 

ಇತರ ವಿಭಾಗಗಳಲ್ಲಿ ಸೇವೆಗಳು ಎಂದಿನಂತೆ ಸಂಚರಿಸಲಿದ್ದು, ಬೆಳಿಗ್ಗೆ 9:00 ನಂತರ ಮಜೆಸ್ಟಿಕ್–ಮೈಸೂರು ರಸ್ತೆ ನಡುವಿನ ಮೆಟ್ರೋ ಸಂಚಾರ ಪುನರಾರಂಭವಾಗಲಿದೆ. ಪ್ರಯಾಣಿಕರು ಮುಂಚಿತವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಪ್ರಯಾಣಿಸಲು ಮನವಿ ಮಾಡಲಾಗಿದೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-02 19:25:00
No Reviews