ಪರ್ವತದ ಮಡಿಲಲ್ಲಿ ವಿಮಾನದ ಅಂತ್ಯ?

ಇಂಡೋನೇಷಿಯಾ ಮರಿನ್ ಅಫೈರ್ಸ್ ಮತ್ತು ಫಿಶರಿಸ್ ಇಲಾಖೆಗೆ ಸೇರಿದ ATR-42-500 ವಿಮಾನವು 11 ಮಂದಿಯನ್ನು ಹೊತ್ತು ಮಕಾಸಾರ್ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿತ್ತು. ಮಧ್ಯಾಹ್ನ 1:17ರ ಸುಮಾರಿಗೆ ರೇಡಾರ್ ಸಂಪರ್ಕದಲ್ಲಿದ್ದ ವಿಮಾನ ಏಕಾಏಕಿ ಸಂಪರ್ಕ ಕಡಿದುಕೊಂಡಿದೆ. ತಕ್ಷಣ ವಿಮಾನವನ್ನು ಟ್ರಾಕ್ ಮಾಡುವ ಪ್ರಯತ್ನ ನಡೆದರೂ ಯಾವುದೇ ಸುಳಿವು ದೊರೆಯಲಿಲ್ಲ.
ಹೀಗಾಗಿ ರಕ್ಷಣಾ ತಂಡಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಮಕಾಸಾರ್‌ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಮೌಂಟ್ ಬುಲು ಸರೌಂಗ್ ಪರ್ವತ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ವಿಮಾನದಲ್ಲಿ ಒಟ್ಟು 11 ಮಂದಿ ಇದ್ದು, ಇವರಲ್ಲಿ 8 ಮಂದಿ ಸಿಬ್ಬಂದಿ ಮತ್ತು 3 ಮಂದಿ ಪ್ರಯಾಣಿಕರು ಇದ್ದರು. ದಟ್ಟ ಮಂಜಿನ ಕಾರಣದಿಂದ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-17 17:49:13
No Reviews