ಕೆವಿಎನ್ ಹಾಗೂ ಚಿರಂಜೀವಿ ಕಾಂಬಿನೇಶನ್: ಬಿಗ್ ಬಜೆಟ್ ಸಿನಿಮಾಗೆ ಅದ್ಧೂರಿ ಮುಹೂರ್ತ!

ಕೆವಿಎನ್ ಪ್ರೊಡಕ್ಷನ್ಸ್ (KVN Production) ಈಗಾಗಲೇ ಮೂರು ಸಿನಿಮಾಗಳ ಮೂಲಕ ಸುಮಾರು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ‘ಕೆಡಿ’ ಬಿಡುಗಡೆ ಬಳಿಕ ಇದೀಗ ‘ಮೆಗಾ 158’ ಅನ್ನು ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರವನ್ನು ‘ವಾಲ್ತೇರು ವೀರಯ್ಯ’ ಹಿಟ್ ನೀಡಿದ್ದ ಬಾಬಿ ಕೊಲ್ಲಿ ನಿರ್ದೇಶಿಸುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಚಿರಂಜೀವಿ ಚಿತ್ರಕ್ಕೆ ಕ್ಲ್ಯಾಪ್ ನೀಡಿ ಶುಭಾರಂಭ ಮಾಡಿದರು.

ಮೆಗಾ ಬ್ರದರ್ಸ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಕ್ಷಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿದೆ. ‘ವಾಲ್ತೇರು ವೀರಯ್ಯ’ ಬಳಿಕ ಮತ್ತೆ ಬಾಬಿ–ಚಿರಂಜೀವಿ ಜೋಡಿ ಒಂದಾಗುತ್ತಿರುವುದರಿಂದ ನಿರೀಕ್ಷೆಗಳು ಗಗನಕ್ಕೇರಿವೆ. ‘ಮೈತ್ರಿ ಮೂವಿ ಮೇಕರ್ಸ್’ ನಿರ್ಮಾಣದ ಈ ಬಿಗ್ ಬಜೆಟ್ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ (DSP) ಸಂಗೀತ ನೀಡುತ್ತಿದ್ದಾರೆ. ಪ್ರಿಯಾಮಣಿ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸಮಾರಂಭದಲ್ಲಿ ವಿವಿ ವಿನಾಯಕ್, ಬಂಡ್ಲಾ ಗಣೇಶ್, ದಿಲ್ ರಾಜು ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಹಾಗೂ ನಾಗಬಾಬು ಉಪಸ್ಥಿತರಿದ್ದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-21 11:19:01
No Reviews